Wednesday, January 22, 2025

‘ಆದಿಪುರುಷ್​​​’ ವಿರುದ್ಧ ಕೇಸ್​​ ದಾಖಲು

ಪ್ರಭಾಸ್​ ನಟನೆಯ ಆದಿಪುರುಷ್​ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್​ ಬಿಡುಗಡೆ ಆದ ಬಳಿಕ ಎಲ್ಲವೂ ತಲೆಕೆಳಗಾಗಿದೆ.

ಅ.2ರಂದು ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಟೀಸರ್​ ರಿಲೀಸ್​ ಮಾಡಲಾಯಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ. ‘ಆದಿಪುರುಷ್​’ ಟೀಸರ್ ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದರಲ್ಲಿನ ಗ್ರಾಫಿಕ್ಸ್​ ಗುಣಮಟ್ಟ ಕಳಪೆ ಆಗಿದೆ ಎಂಬುದು ಅಸಮಾಧಾನಕ್ಕೆ ಕಾರಣ ಆಗಿದೆ. ಅಷ್ಟೇ ಅಲ್ಲದೇ ಈಗ ಕಾನೂನಿನ ಸಂಕಷ್ಟ ಕೂಡ ಎದುರಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ಪ್ರಭಾಸ್​, ಸೈಫ್​ ಅಲಿ ಖಾನ್​, ನಿರ್ದೇಶನ ಮಾಡಿರುವ ಓಂ ರಾವತ್​ ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್​ ದಾಖಲಾಗಿದೆ. ರಾಮಾಯಣ ರೀತಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇದು ಜನರ ಭಾವನೆಗೆ ಸಂಬಂಧಿಸಿದ ವಿಚಾರ. ಆದಿಪುರುಷ್​ ಚಿತ್ರದಲ್ಲಿ ರಾಮ, ರಾವಣ, ಸೀತೆ ಪಾತ್ರಗಳನ್ನು ಸರಿಯಾಗಿ ತೋರಿಸಿಲ್ಲ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅಕ್ಟೋಬರ್​ 27ರಂದು ವಿಚಾರಣೆ ನಡೆಸಲು ಕೋರ್ಟ್​ ದಿನಾಂಕ ನಿಗದಿ ಮಾಡಿದೆ. ಇತ್ತೀಚೆಗೆ ದೆಹಲಿಯಲ್ಲೂ ಚಿತ್ರತಂಡದ ವಿರುದ್ಧ ಇದೇ ರೀತಿಯ ಕೇಸ್​ ದಾಖಲಾಗಿತ್ತು.

RELATED ARTICLES

Related Articles

TRENDING ARTICLES