Monday, December 23, 2024

ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ: B.C. ನಾಗೇಶ್

ಬೆಂಗಳೂರು : ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಶಿಕ್ಷಣ ಸಚಿವ B.C. ನಾಗೇಶ್ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಶಿಕ್ಷಣ ಕಾಯ್ದೆಯ ಪ್ರಕಾರ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ಸರ್ಕಾರಿ ಮತ್ತು ಎಲ್ಲಾ ಶಾಲೆಗಳು ಅದೇ ಕಾಯ್ದೆಯ ಪ್ರಕಾರ ನಡೆಯುತ್ತೆ ಎಂದು B.C. ನಾಗೇಶ್ ತಿಳಿಸಿದರು. ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಆಚರಣೆ, ಚಿಹ್ನೆಗಳ ಪ್ರದರ್ಶನ ಸಲ್ಲದು ಎಂದರು.

ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ. ಪ್ರಪಂಚದ ಎಲ್ಲೆಡೆ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಒಳ್ಳೇ ತೀರ್ಪು ಬರುತ್ತೆ ಎನ್ನುವ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ ಇದು ವಿಭಜಿತ ತೀರ್ಪು ಬಂದಿದೆ. ಮುಂದಿನ ತೀರ್ಪಿಗೆ ಸರ್ಕಾರ ಕಾಯುತ್ತೆ ಎಂದು ಶಿಕ್ಷಣ ಸಚಿವ B.C. ನಾಗೇಶ್​​ ಹೇಳಿದರು

ವಿಶ್ವದಾದ್ಯಂತ ಮಹಿಳೆಯರು ಹಿಜಾಬ್ ವಿರುದ್ಧ ಬೀದಿಗಿಳಿದಿದ್ದಾರೆ. ಇರಾನ್​ನಂಥ ಇಸ್ಲಾಮಿಕ್ ದೇಶಗಳಲ್ಲಿಯೇ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ತೀರ್ಪು ಸಹ ಕರ್ನಾಟಕ ಹೈಕೋರ್ಟ್ ತೀರ್ಪು ಎತ್ತಿಹಿಡಿಯಬಹುದು ಎಂದು ನಿರೀಕ್ಷಿಸಿದ್ದೆ. ಹಾಗೆಂದು ನಾನು ಸುಪ್ರೀಂಕೋರ್ಟ್ ವಿರುದ್ಧ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Related Articles

TRENDING ARTICLES