Monday, December 23, 2024

ಅಪ್ಪು ವಿಶ್ವದಾಖಲೆಯ ಕಟೌಟ್.. ಮುತ್ತುರಾಜ್​​​​​​​ಗೆ ದಸರಾ ಲೈಟ್

ಅಪ್ಪು ಡ್ರೀಮ್​ ಪ್ರಾಜೆಕ್ಟ್​ ಗಂಧದ ಗುಡಿ ಚಿತ್ರದ ಹವಾ ಜೋರಾಗಿದೆ. ರಿಲೀಸ್​ ಡೇಟ್​​ಗೆ ಸಕಲ ಸಿದ್ಧತೆ ನಡೆತಿದ್ದು, ಯುವರಾಜನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕಂಡು ಕೇಳರಿಯದ ಹಬ್ಬಕ್ಕೆ ಸಾಕ್ಷಿಯಾಗಲಿರುವ ಗಂಧದ ಗುಡಿ ಸೆಲೆಬ್ರೇಷನ್​​​​​ಗೆ ಭರ್ಜರಿ ತಯಾರಿ ನಡಿತಿದೆ. ಯೆಸ್​​​.. ಹೇಗಿರಲಿದೆ ಗುಡಿಯೊಳಗಿನ ಪರಮಾತ್ಮನ ಉತ್ಸವ ಗೊತ್ತಾಗ್ಬೇಕಾ..? ನೀವೇ ಓದಿ.

  • ದೀಪಗಳ ಬೆಳಕಲ್ಲಿ ಜಗಮಗಿಸಲಿವೆ ಯುವರಾಜನ ಬಿಗ್​​ ಕಟೌಟ್ಸ್​​​​..!

ಸೌಥ್​ ಟು ನಾರ್ತ್​​​ ಅಪ್ಪು ಅಬ್ಬರ ಬಲು ಜೋರಾಗಿದೆ. ಗಂಧದಗುಡಿ ಸಿನಿಮಾವನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ಎಂಜಾಯ್​ ಮಾಡೋಕೆ ಕೋಟ್ಯಂತರ ಅಭಿಮಾನಿಗಳು ಕಾತರರಾಗಿದ್ದಾರೆ. ಹಳ್ಳಿಯ ಹೈದನಿಂದ ಹಿಡಿದು ದಿಲ್ಲಿಯ ಮೋದಿವರೆಗೂ ಗಂಧದ ಗುಡಿ ಕ್ಯೂರಿಯಾಸಿಟಿ ಮೂಡಿಸಿದೆ. ಈ ನಡುವೆ ರಿಲೀಸ್ ದಿನದಂದು​ ಕಂಡು ಕೇಳರಿಯದ ರೀತಿಯಲ್ಲಿ ಭರ್ಜರಿ ಸಿದ್ಧತೆ ನಡಿತೀದೆ.

ಜೇಮ್ಸ್​ ಚಿತ್ರವನ್ನು ತಲೆ ಮೇಲೆ ಹೊತ್ತು ಮೆರೆದಿದ್ದ ಫ್ಯಾನ್ಸ್​​ ಗಂಧದ ಗುಡಿ ಚಿತ್ರದ ಸೆಲೆಬ್ರೇಷನ್​​ಗೆ ಸಜ್ಜಾಗಿದ್ದಾರೆ. ವಿಶ್ವದಾಖಲೆಯ ಮಟ್ಟದಲ್ಲಿ ಇತಿಹಾಸ ಬರೆಯೋ ಉತ್ಸುಕತೆಯಲ್ಲಿ ಅಭಿಮಾನಿಗಳು ತಯಾರಾಗಿದ್ದಾರೆ. ಅಪ್ಪು ಸಮಾಧಿ ಬಳಿ ಬರೋಬ್ಬರಿ 75 ಕಟೌಟ್​ಗಳು ರಾರಾಜಿಸಲಿವೆ. ಜತೆಗೆ ಕಟೌಟ್ಸ್​​​ಗಳಿಗೆ ಭಾರಿ ಪ್ರಮಾಣದ ಹೂವಿನ ಹಾರಗಳ ಅಲಂಕಾರ ಜೀವ ತುಂಬಲಿದೆ.

ಯೆಸ್​​​..  ಅಪ್ಪು ಸಮಾಧಿ ಸುತ್ತಾ ಒಂದು ಕಿಮೀವರೆಗೂ ದಸರಾ ಲೈಟ್ಸ್​​ ಮಿನುಗಲಿವೆ. ದೀಪಾಲಂಕಾರದ ಬೆಳಕಲ್ಲಿ ಕಂಠೀರವ ಸ್ಟುಡಿಯೋ ಸುತ್ತಾ ಬಣ್ಣ ಬಣ್ಣದ ಬೆಳಕಿನ ಹೊಳಪು ಇರಲಿದೆ. ಜತೆಗೆ ರಿಲೀಸ್​ ದಿನವೇ ಕೆಜಿ ರಸ್ತೆ, ಮಾಗಡಿ ರಸ್ತೆಯ ಥಿಯೇಟರ್​​​ಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಲಿದೆ.

ಅಪ್ಪು ಪುಣ್ಯಸ್ಮರಣೆಯ ದಿನದಂದು ನಿರಂತರ ಅನ್ನ ದಾಸೋಹ ಏರ್ಪಡಿಸಲಾಗಿದೆ. ಬೆಳಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆಯವರೆಗೂ ದರ್ಶನಕ್ಕೆ ಬರುವ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಅಕ್ಟೋಬರ್​ 21 ರಂದು ನಡೆಯಲಿರುವ ಪ್ರೀ ರಿಲೀಸ್​ ಇವೆಂಟ್​​ಗೆ ರಜನಿಕಾಂತ್​​, ಅಮಿತಾಭ್​ ಭಚ್ಚನ್ ಸೇರಿ ಮುಂತಾದ ಸ್ಟಾರ್​ ನಟ ನಟಿಯರಿಗೆ ಆಹ್ವಾನ ನೀಡಲಾಗಿದ್ದು ಭಾಗವಹಿಸುವ ಮುನ್ಸೂಚನೆ ಕೂಡ ಸಿಕ್ಕಿದೆ. ಒಟ್ಟಾರೆ ಈ ಬಾರಿ ಅಪ್ಪು ಸಿನಿಮೋತ್ಸವ ಅದ್ಧೂರಿಯಾಗಿ ನಡೆಯೋದು ಪಕ್ಕಾ ಆದಂತಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ      

RELATED ARTICLES

Related Articles

TRENDING ARTICLES