ಸೌತ್ ಸಿನಿದುನಿಯಾದ ಗತ್ತು ಗೈರತ್ತನ್ನು ದುಪ್ಟಟ್ಟು ಮಾಡಿದ ಪ್ಯಾನ್ ಇಂಡಿಯಾ ಸಿನಿಮಾಗಳು ಪುಷ್ಪ, ಆರ್ಆರ್ಆರ್, ಕೆಜಿಎಫ್, ಬಾಹುಬಲಿ. ಈ ಮೂಲಕ ಪ್ಯಾನ್ ಇಂಡಿಯಾ ಅಂದ್ರೆ ಬಾಲಿವುಡ್ ಅಂತಾ ಮೂಗು ಮುರಿತಿದ್ದ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಇದೀಗ ಮತ್ತೊಮ್ಮೆ ಅಲ್ಲು ಸೈಮಾದಲ್ಲಿ ಗುಡುಗಿದ್ದು ಎಲ್ಲರನ್ನೂ ಎಚ್ಚರಿಸೋ ಕೆಲಸ ಮಾಡಿದ್ದಾರೆ.
ಸೈಮಾ, ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ಗಳು ಸಿಲಿಕಾನ್ ಸಿಟಿಯನ್ನು ಹರಸಿ ಬಂದಿದ್ದು ಕನ್ನಡದ ಹೆಮ್ಮಯೇ ಸರಿ. ದುಬೈ, ಮಲೇಶಿಯಾ, ಚೆನ್ನೈಗಳಿಗೆ ಪ್ರಶಸ್ತಿ ಹರಸಿ ಹೋಗುತ್ತಿದ್ದ ಕನ್ನಡ ಕಲಾವಿದರು ಕೊನೆಯ ಸಾಲಿನಲ್ಲಿ ಕೂತು ಎದ್ದು ಬರ್ತಿದ್ರು. ಇದೀಗ ದೊಡ್ಡ ದೊಡ್ಡ ಸಮಾರಂಭಗಳಿಗೂ ಬೆಂಗಳೂರು ಹೆಬ್ಬಾಗಿಲಾಗಿದೆ. ಕನ್ನಡದ ಸ್ಟಾರ್ ನಟರು ಎಲ್ಲರಿಗಿಂತ ಮಿಂಚ್ತಿದ್ದಾರೆ.
ಇತ್ತೀಚೆಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಮಾ ಸಮಾರಂಭ ರಂಗೇರಿತ್ತು. ಈ ವೇದಿಕೆಯಲ್ಲಿ ಅಲ್ಲು ಅರ್ಜುನ್ ಕೊಟ್ಟ ಸಂದೇಶ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿತ್ತು. ಬೆಸ್ಟ್ ಆ್ಯಕ್ಟರ್ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅಲ್ಲು ಅರ್ಜುನ್ ಸಕ್ಸಸ್ ಸೀಕ್ರೇಟ್ ಬಿಚ್ಚಿಟ್ಟರು.
ಪ್ಯಾನ್ ಇಂಡಿಯಾ ಆಂದ್ರೆ ಹಿಂದಿ ಸಿನಿಮಾ ಎಂದುಕೊಂಡಿದ್ದವ್ರಿಗೆ ಅಲ್ಲು ಮಾತು ಖಡಕ್ ಆಗಿತ್ತು. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಅಂತಾ ಇಲ್ಲ. ಹೀಗೆಲ್ಲಾ ಎಲ್ಲರು ಕೊಲಾಬರೇಷನ್ ಆಗಿದ್ದೇವೆ. ನಾವೆಲ್ಲಾ ಒಂದೇ. ದಿಸ್ ಇಸ್ ಇಂಡಿಯನ್ ಸಿನಿಮಾ ಎಂದ್ರು.
ಈ ಬಾರಿಯ ಸೈಮಾ ಅಪ್ಪು ಅವರ ಸ್ಮರಣೆಯಲ್ಲಿ ಜರುಗಿತು. ಸ್ಯಾಂಡಲ್ವುಡ್ನಿಂದ ಶಿವಣ್ಣ, ರಾಕಿಭಾಯ್ ಸೇರಿದಂತೆ ಸೌತ್ ಸಿನಿದುನಿಯಾದ ಕಮಲ್ ಹಾಸನ್, ಬಾಲಿವುಡ್ ಕಮಲ್ ಹಾಸನ್ ಮುಂತಾದವ್ರು ಪಾಲ್ಗೊಂಡಿದ್ರು. ಏನೇ ಇರಲಿ ಭಾರತೀಯ ಚಿತ್ರರಂಗವನ್ನು ಒಂದೇ ಮನೆಯಂತೆ ನೋಡುವ ಪರಿಕಲ್ಪನೆಗೆ ಮುನ್ನಡಿ ಬರೆದ ಅಲ್ಲು ಅರ್ಜುನ್ಗೆ ಹ್ಯಾಟ್ಸಪ್.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ