Wednesday, January 22, 2025

ಮದುವೆಯಾದ ಯುವತಿಗೆ ಮೆಸೇಜ್ ಹಾಕಿದ್ದಕ್ಕೆ ಕೊಲೆ

ಹಾಸನ: ಮದುವೆಯಾಗಿದ್ದ ಯುವತಿಗೆ ಮೆಸೇಜ್ ಮಾಡಿದ ವಿಚಾರಕ್ಕೆ ಶುರುವಾದ ಜಗಳ‌ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ನಡೆದಿದೆ.

ಮೃತ ದುರ್ದೈವಿ ಗಂಗಾಧರ ಊಪಿನಹಳ್ಳಿ ಗ್ರಾಮದವನಾಗಿದ್ದು, ಮದುವೆಯಾಗಿದ್ದ ಯುವತಿಗೆ ಮೆಸೇಜ್ ಮಾಡಿದ ವಿಚಾರಕ್ಕೆ ಈ ಗಲಾಟೆ ಆರಂಭವಾಗಿ, ಇಂದು ಗಂಗಾಧರನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಯುವತಿ ಕಡೆಯವರು ಹೋಗಿದ್ದರು.

ಈ ವೇಳೆ ಗಂಗಾಧರ್​ ಮೇಲೆ ತೀವ್ರ ದೊಣ್ಣೆಗಳಿಂದ ಹಲ್ಲೆಯಾದ ಹಿನ್ನಲೆಯಲ್ಲಿ ತನ್ನ ಅಣ್ಣ ಮೋಹನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಗಂಗಾಧರನನ್ನು ಕರೆದುಕೊಂಡು ಬಂದು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ಸಹೋದರ್​ ಮೋಹನ್ ದಾಖಲಿಸಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ ಸಾವು ಅನುಭವಿಸಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES