Thursday, November 7, 2024

ಇಂದಿನಿಂದ ಓಲಾ-ಉಬರ್ ಆಟೋ​ ಓಡಾಡುವಂತಿಲ್ಲ

ಬೆಂಗಳೂರು : ಓಲಾ-ಉಬರ್ ಆ್ಯಪ್​​ ಆಧರಿತ ಆಟೋ ಸೇವೆ ಬಂದ್​​ ಆಗಿದ್ದು, ಓಲಾ ಆಟೋ ರಸ್ತೆಗೆ ಇಳಿಸದಂತೆ ಸರ್ಕಾರ ತಾಕೀತು ಮಾಡಿದೆ.

ನಗರದಲ್ಲಿ ಓಲಾ-ಉಬರ್ ಕಂಪನಿಗಳಿಂದ ಸುಲಿಗೆ ಆರೋಪ ಮಾಡಿದ್ದು, ಓಲಾ ಆಟೋ ರಸ್ತೆಗೆ ಇಳಿಸದಂತೆ ಸರ್ಕಾರ ತಾಕೀತು ಮಾಡಿದೆ. ಓಲಾ-ಉಬರ್ ಆಟೋ​ ಸೇವೆ ನಿಯಂತ್ರಣಕ್ಕೆ ದೂರು ನೀಡಲು ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ.

ಇನ್ನು, ಓಲಾ ಉಬರ್ ಆಟೋ ಓಡಾಡಿದ್ರೆ ಕಂಪನಿ ಮೇಲೆ ದಂಡಾಸ್ತ್ರ ಪ್ರಯೋಗಿಸಿದ್ದು, ಓಲಾ-ಉಬರ್ ಆಟೋಗೆ 5 ಸಾವಿರ ರೂ. ದಂಡದ ವಾರ್ನಿಂಗ್​​​ ಮಾಡಿದ್ದು, ಸಾರಿಗೆ ಇಲಾಖೆಯಿಂದ ಆ್ಯಪ್​ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
ಓಲಾ-ಉಬರ್ ದಂಡ ಪಾವತಿಸಲು 7 ದಿನ ಕಾಲಾವಕಾಶ ನೀಡಿದ್ದು, ಕಂಪನಿಗಳು ಆಟೋ ಲೈಸೆನ್ಸ್​​​ಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಇನ್ನು, ಅನುಮತಿ ಪಡೆದ ಬಳಿಕ ಸಂಚಾರಕ್ಕೆ ಅವಕಾಶ ಎಂದಿರೋ ಸಾರಿಗೆ ಇಲಾಖೆ ಆದೇಶ ಪಾಲಿಸುತ್ತಾ ಎಂದು ಕಾದುನೊಡಬೇಕು.

RELATED ARTICLES

Related Articles

TRENDING ARTICLES