Wednesday, January 22, 2025

ಯಕ್ಷಗಾನ ವೇಷ ತೊಟ್ಟು ಸಂಭ್ರಮಿಸಿದ ಸಚಿವ ಕೆ ಸುಧಾಕರ್​.!

ಕಾರವಾರ: ಶಾಸಕ ಸುನಿಲ್ ನಾಯ್ಕ್​ ಅವರ ಮನೆಗೆ ಭೇಟಿ ವೇಳೆ ಯಕ್ಷಗಾನ ಬಯಲಾಟ ಮುಗಿದ ಬಳಿಕ ಸ್ವತಃ ಯಕ್ಷಗಾನ ವೇಷ ಹಾಕಿಕೊಂಡು ಸಚಿವ ಡಾ.ಕೆ ಸುಧಾಕರ್​ ಗಮನಸೆಳೆದರು.

ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ ನಿವಾಸದಲ್ಲಿ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಸಚಿವರು, ಸಚಿವರು ಯಕ್ಷಗಾನದ ವಸ್ತ್ರ, ಪಗಡೆ ಹಾಗೂ ಆಭರಣ ತೊಟ್ಟು ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು.

ಈ ಕುರಿತು ಟ್ವೀಟರ್​ನಲ್ಲಿ ಹಂಚಿಕೊಂಡ ಡಾ.ಕೆ ಸುಧಾಕರ್​ ಅವರು, ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ.

ನೆನ್ನೆ ರಾತ್ರಿ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ ಎಂದು ಹೇಳಿದರು.

RELATED ARTICLES

Related Articles

TRENDING ARTICLES