ವಿಜಯನಗರ : 2023 ರ ವಿಧಾನ ಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರೋ ಕೇಸರಿ ಪಾಳಯವು ವಿಜಯನಗರದಲ್ಲಿ ಅದ್ದೂರಿ ಜನ ಸಂಕಲ್ಪ ಯಾತ್ರೆ ನಡೆಸಿದೆ. ಬೆಳಗ್ಗೆ ದಲಿತರ ಮನೆಯ ಉಪಹಾರದಿಂದ ಪ್ರಾರಂಭವಾದ ಜನ ಸಂಕಲ್ಪ ಯಾತ್ರೆ ಕುರುಬರ ಮನೆಯಲ್ಲಿ ಊಟದ ಮೂಲಕ ಮುಕ್ತಾಯವಾಯಿತು.
ರಾಜ್ಯದ ವಿಧಾನ ಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರೋ ಬೆನ್ನೆಲ್ಲೆ, ಕಮಲ ಪಾಳಯವು ಚುನಾವಣೆ ಪ್ರಚಾರದ ಅಖಾಡಕ್ಕೆ ಇಂದು ಹೊಸಪೇಟೆಯಲ್ಲಿ ನಡೆದ ಜನ ಸಂಕಲ್ಪ ಮೂಲಕ ಇಳಿದಿದೆ.
ಇಂದು ಕಮಲಾಪುರದಿಂದ ನೇರವಾಗಿ ಹೊಸಪೇಟೆಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಏಳೂ ಕೇರಿಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮದಕರಿ ನಾಯಕ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ವೇದಿಕೆಗೆ ಆಗಮಿಸಿದ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸಚಿವ ಆನಂದ್ ಸಿಂಗ್ ಶ್ರೀರಾಮುಲು ಸೇರಿದಂತೆ ವೇದಿಕೆಯ ಮೇಲೆ ಗಣ್ಯರನ್ನು ಹಾಡಿ ಹೋಗಳಿದ ಬಳಿಕ, ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳಲ್ಲಿ 10 ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ ಅಂತ ಹೇಳಿದರೆ, ಸಚಿವ ಶ್ರೀರಾಮುಲು ಕೂಡ ಅಭಿವೃದ್ಧಿ ಕುರಿತು ಮಾತನಾಡಿ, ಕಾಂಗ್ರೆಸ್ ನ ವಿರುದ್ಧ ಹರಿಹಾಯ್ದರು. ಶ್ರೀರಾಮುಲು ಅವರು ರಾಹುಲ್ ಗಾಂಧಿಯ ಪಾದಯಾತ್ರೆ ಯಾವ ಉದ್ದೇಶಕ್ಕಾಗಿ ಅಂತ ಪ್ರಶ್ನೆ ಮಾಡಿದರು..
ಶಾಸಕ ರಾಜೂಗೌಡ ಮೀಸಲಾತಿ ವಿಚಾರದಲ್ಲಿ ಪರೋಕ್ಷವಾಗಿ ಜಾರಕಿಹೊಳಿಗೆ ಟಾಂಗ್ ಕೊಟ್ರು. ಇನ್ನೂ ಸಚಿವ ಆನಂದ್ ಸಿಂಗ್, ಶ್ರೀರಾಮುಲು, ಶಾಸಕ ರಾಜೂಗೌಡ ಮೀಸಲಾತಿ ಕೊಡಿಸಿದ್ದು ಬಿಜೆಪಿ ಸರ್ಕಾರ ಅಂತ ಹಾಲಿ, ಮಾಜಿ ಸಿಎಂಗಳನ್ನು ಹಾಡಿ ಹೊಗಳಿ, ಪ.ಜಾ, ಪ.ಪಂಗಡ ಸಮುದಾಯದವರು, ಬಿಜೆಪಿ ಜತೆ ಇರಬೇಕು ಅಂತ ಮಂತ್ರ ಹಾಡಿದರು.
ಜನ ಸಂಕಲ್ಪ ಯಾತ್ರೆಯೂದ್ದಕ್ಕೂ ಹಾಲಿ, ಮಾಜಿ ಸಿಎಂಗಳು ಸೇರಿದಂತೆ ವೇದಿಕೆಯ ಮೇಲಿರೋ ಗಣ್ಯರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇಷ್ಟು ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಎಸ್ಸಿ, ಎಸ್ಟಿ ಗಳಿಗೆ ಏನೂ ಸಹ ಮಾಡಲಿಲ್ಲಾ, ಸರ್ವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಕೊಟ್ಟು, ಹೊರಗಡೆ ಬಂದು ನಾಟಕ ಮಾಡ್ತಾರೆ ಅಂತ ಹೇಳೋದ್ರ ಜತೆಗೆ, ಕಾಂಗ್ರೆಸ್ ಜೋಡೋ ಯಾತ್ರೆಯ ವಿರುದ್ಧ ಮಾತನಾಡಿದರು.
ಇನ್ನೂ ವಿಜಯನಗರ ಜಿಲ್ಲೆ ಮಾಡಿದ್ದಕ್ಕೆ ಪ್ರತಿಫಲವಾಗಿ ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ-ವಿಜಯನಗರ ಅವಿಭಜಿತ ಜಿಲ್ಲೆಗಳ 10 ಕ್ಷೇತ್ರಗಳಲ್ಲಿ ಕೇಸರಿ ಬಾವುಟ ಹಾರಿಸಿ ಅಂತ ಮಾಜಿ ಸಿಎಂ ಯಡಿಯೂರಪ್ಪ ಟಾಸ್ಕ್ ಕೊಟ್ಟು ಹೋದರು.
ಬಸವರಾಜ್ ಹರನಹಳ್ಳಿ, ಪವರ್ ಟಿವಿ,ಬಳ್ಳಾರಿ