Wednesday, January 22, 2025

ಪಕ್ಷದ ಜೊತೆ ಜೊತೆಗೆ ವೈಯಕ್ತಿಕ ವರ್ಚಸ್ಸು ಬದಲಿಸಿದ ರಾಹುಲ್ ಗಾಂಧಿ

ಬೆಂಗಳೂರು : ಪಕ್ಷದ ಜೊತೆ ಜೊತೆಗೆ ವೈಯಕ್ತಿಕ ವರ್ಚಸ್ಸನ್ನು ರಾಹುಲ್ ಗಾಂಧಿ ಪಾದಾಯಾತ್ರೆಯ ಮೂಲಕ ಹೆಚ್ಚಿಸಿಕೊಂಡಿದ್ದಾರೆ.

ಇನ್ನು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುತ್ತಿರುವ ಪಾದಯಾತ್ರೆ, 33 ದಿನಗಳನ್ನು ಪೂರೈಸಿದ ಯಾತ್ರೆ ಅನೇಕ ಘಟನೆಗಳ ಮೂಲಕ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಲ್ಲಿ ಇಮೇಜ್ ಬದಲಿಸಿದ ರಾಹುಲ್ , ತಮಿಳುನಾಡು,ಕೇರಳ ಮುಗಿಸಿ ಕರ್ನಾಟಕದಲ್ಲಿ ಸಾಗುತ್ತಿರುವ ಯಾತ್ರೆ, ಮಳೆಯಲ್ಲಿ ಭಾಷಣ,ಯಾತ್ರೆ ಮಾಡಿ ಬದ್ದತೆ ಪ್ರದರ್ಶಿಸಿದ್ದು, ಸೋನಿಯಾ ಗಾಂಧಿ ಶೂ ಲೇಸ್ ಕಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಐಕ್ಯತಾ ಯಾತ್ರೆ ಉದ್ದಕ್ಕೂ ಜನಸ್ಪಂದನಾ ಕಾರ್ಯದಲ್ಲಿ ತೊಡಗಿರುವ ರಾಹುಲ್, ವಿವಿಧ ವರ್ಗಗಳ ಜೊತೆ ಸಂವಾದ,ಸಮುದಾಯವಾರು,ಸ್ಥಳೀಯವಾರು ಮುಖಂಡರ ಭೇಟಿ ಮಾಡುತ್ತಿದ್ದಾರೆ. ಈ ಮೂಲಕ ಎಲ್ಲಾ ಭಾಗದಲ್ಲೂ ವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ರಾಹುಲ್, ಮಹಿಳೆ, ಮಕ್ಕಳ‌ ಜೊತೆಗಿನ ಒಡನಾಟದ ಮೂಲಕ ಸಿಂಪಲ್ ವ್ಯಕ್ತಿ ಎಂಬ ಹೊಗಳಿಕೆಯನ್ನು ಸಾಮಾನ್ಯ ಜನರಿಂದ ಪಡೆಯುತ್ತಿದ್ದಾರೆ.

ಅದಲ್ಲದೇ, ಪಕ್ಷದ ನಾಯಕರ ಜೊತೆಗಿನ ತೆರೆಮರೆ‌ ಮುನಿಸು ಶಮನಕ್ಕೂ ಮುಂದಾಗಿರುವ ರಾಹುಲ್ ಗಾಂಧಿ, ಒಟ್ಟಿಗೆ ಹೆಜ್ಜೆ ಹಾಕಿಸುವ ನೆಪದಲ್ಲಿ ಒಗ್ಗಟ್ಟು ಪ್ರದರ್ಶನದ ಸಂದೇಶ ರವಾನಿಸುತ್ತಿದ್ದಾರೆ. ಈ ಮೂಲಕ 2024 ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ರಾಹುಲ್, ಪ್ರಧಾನಿ ಮೋದಿ ವಿರುದ್ದ ಪ್ರಬಲ ಅಭ್ಯರ್ಥಿ ಅಲ್ಲ ಎಂದು ಟೀಕಿಸಿದ್ದ ವಿರೋಧಿ ಬಣ, ಈ ಯಾತ್ರೆಯ ಮೂಲಕ ವಿರೋಧಿ ಬಣದ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಭಾರತ್ ಯಾತ್ರೆಯ ಮೂಲಕ ಕೆಳಸ್ತರದ ಜನರ ಭಾವನೆಗಳ ಬದಲಾಯಿಸುತ್ತಿರುವ ರಾಹುಲ್, ರಾಜಕೀಯ ಲೆಕ್ಕಾಚಾರಗಳ ಅಡಿಯಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES