Monday, December 23, 2024

ಅಪ್ಪು ಮಾಡಬೇಕಿದ್ದ ‘ದ್ವಿತ್ವ’ಕ್ಕೆ ಫಹಾದ್ ‘ಧೂಮಂ’ ಟಚ್

ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತ ಸೂಪರ್​ ಹಿಟ್​ ಸಿನಿಮಾ ಕೊಟ್ಟ ಸಂಸ್ಥೆ ಹೊಂಬಾಳೆ. ಯೆಸ್​​.. ಕನ್ನಡ ಮಣ್ಣಿನ ಹೆಮ್ಮೆಯ ಸಂಸ್ಥೆ ಹೊಂಬಾಳೆ ಸದ್ಯ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಅದ್ದೂರಿ ಸಿನಿಮಾಗಳ ಒಡೆಯನಾಗಿರೋ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮತ್ತೊಂದು ಪ್ಯಾನ್​ ಇಂಡಿಯಾ ಮೂವಿ ಸೆಟ್ಟೇರಿದೆ. ಈ ಚಿತ್ರಕ್ಕೂ ಪವರ್ ಸ್ಟಾರ್​​ ಪುನೀತ್​ಗೂ ಇರೋ​​​ ಬಿಹೈಂಡ್​​ ದಿ ಸ್ಟೋರಿ ಏನ್​ ಗೊತ್ತಾ..? ನೀವೇ ಓದಿ.

ಸಸ್ಪೆನ್ಸ್​​​ ಥ್ರಿಲ್ಲರ್​​​​​​ ಕಥೆಗೆ ಪ್ರಶಾಂತ್​​ ನೀಲ್​​ ಸ್ಪೆಷಲ್​ ಟಿಪ್ಸ್​​​​..!

ಯುವರತ್ನ, ಕೆಜಿಎಫ್​​​​, ಕಾಂತಾರ ಹೀಗೆ ಸೂಪರ್​​ ಹಿಟ್​ ಸಿನಿಮಾಗಳ ರಾಜಕುಮಾರನಾಗಿ ಮೆರೆಯುತ್ತಿರುವ ಪ್ರತಿಷ್ಟಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ. ಸದ್ಯ ಈ ಸಂಸ್ಥೆಯ ನ್ಯೂ ಪ್ರಾಜೆಕ್ಟ್​​​ ಧೂಮಂ. ಈ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಪ್ರಶಾಂತ್​ ನೀಲ್​​, ವಿಜಯ್​ ಕಿರಗಂದೂರ್​​​, ನಾಯಕ ಫಾಹದ್​​ ಪಾಸಿಲ್​​​, ಅಪರ್ಣಾ ಬಾಲಮುರುಳಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಹೊಂಬಾಳೆಯ ಹನ್ನೆರಡನೇ ಸಿನಿಮಾ ಇದಾಗಿದ್ದು ಸಸ್ಪೆನ್ಸ್​ ಥ್ರಿಲ್ಲರ್​ ಜಾನರ್​​ನಲ್ಲಿ ಮೂಡಿ ಬರ್ತಿದೆ. ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿದ್ದು ಲೂಸಿಯಾ ಖ್ಯಾತಿಯ ಪವನ್​​​​ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಕಂಠೀರವ ಸ್ಟೂಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಕೆಜಿಎಫ್​ ನೀಲ್​ ಕೂಡ ಭಾಗಿಯಾಗಿದ್ದು ಲೂಸಿಯಾ ಪವನ್​​ಗೆ ಡೈರೆಕ್ಷನ್​​ ಟಿಪ್ಸ್​​ ಕೂಡ ಕೊಟ್ಟಿದ್ದಾರೆ.

ಮೋಸ್ಟ್​ ಕ್ರಿಯೇಟಿವ್​​​​ ಹೆಡ್​​​​, ಚಾಣಕ್ಯನ ತಂತ್ರಗಾರಿಕೆ ಇರೋ ಪವನ್​ ನೀಲ್​ ಜತೆ ಚರ್ಚೆ ನಡೆಸಿದ್ರು. ಅಪ್ಪುಗೋಸ್ಕರ ಎತ್ತಿಟ್ಟಿದ್ದ ಕಥೆಯೇ ಧೂಮಂ ಎಂಬ ಮಾತುಗಳು ಕೇಳಿ ಬರ್ತಿದ್ದು ಸಿನಿಮಾ  ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

  • ಪವನ್​​​​​ ಮಾಂತ್ರಿಕತೆಯಲ್ಲಿ ಮತ್ತೆ ಯು-ಟರ್ನ್​​​ ಜಾದು
  • ಧೂಮಂ ಚಿತ್ರಕ್ಕೆ ‘ಪುಷ್ಪ’ ಸ್ಟಾರ್​​​​ ಫಾಸಿಲ್​​​ ತಾಕತ್ತು..!

ವಿಜಯ್​ ಕಿರಗಂದೂರ್​​​​​ ಸಖತ್​ ಚ್ಯುಸಿಯಾಗಿದ್ದು ಪಕ್ಕಾ ಕಿಕ್ಕು ಕೊಡೋ ಸಿನಿಮಾಗಳಿಗೆ ಬಂಡವಾಳ ಹೂಡ್ತಿದ್ದಾರೆ. ಕ್ರಿಯೇಟಿವ್​​ ನಿರ್ದೇಶಕರ ಮೇಳೆ ಕೋಟಿ ಕೋಟಿ ಬಂಡವಾಳ ಸುರಿಯುತ್ತಿರುವ ಹೊಂಬಾಳೆ ಲೂಸಿಯ್​ ಪವನ್​ ಮೇಲೆ ಭರವಸೆ ಇಟ್ಟಿದೆ. ಲೂಸಿಯಾ, ಯು ಟರ್ನ್​​​​ ಚಿತ್ರಗಳ ವಿಕ್ರಮನಿಗೆ ಧೂಮಂ ಚಿತ್ರದ ಜವಾಬ್ದಾರಿ ಹೊರಿಸಿದೆ. ಪವನ್​​ ಸ್ಕ್ರಿಪ್ಟ್​​ ಕೇಳಿ ಫಿದಾ ಆಗಿರೋ ವಿಜಯ್​​​​ ಅಂಡ್​ ಟೀಮ್​​​ ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರೋ ಪ್ಲಾನ್​ ಮಾಡಿಕೊಂಡಿದೆ.

ಇಂಟರ್​​​​ನ್ಯಾಷನಲ್​ ಫಿಲ್ಮ್​​​​ , ನ್ಯಾಷನಲ್​​​, ಫಿಲ್ಮ್​ ಫೇರ್​ ಅವಾರ್ಡ್​​​ ಗೆದ್ದು ಬೀಗ್ತಿರೋ ಹೆಸರಾಂತ ನಟ ಫಹಾದ್​ ಫಾಸಿಲ್​​​​ ಧೂಮಂ ಚಿತ್ರದ ನಾಯಕನಾಗಿ ಕಾಣಿಸ್ತಿದ್ದಾರೆ. ಪುಷ್ಪ, ವಿಕ್ರಮ್​ ಚಿತ್ರಗಳಲ್ಲಿ ನಟರಾಕ್ಷಸನಂತೆ ನಟಿಸಿರುವ ವರ್ಸಟೈಲ್​​ ಆ್ಯಕ್ಟರ್​​ ಫಹಾದ್​​ ಚಿತ್ರದ ಬಿಗ್ಗೆಸ್ಟ್​ ಸ್ಟ್ರೆಂಥ್​ ಆಗಿದ್ದಾರೆ. ಸೂರರೈ ಪೊಟ್ರು ಖ್ಯಾತಿಯ ಅಪರ್ಣಾ ನಾಯಕಿಯಾಗಿದ್ದು ಚಿತ್ರಕ್ಕೆ ಕಿಕ್ಕಸ್ಟಾರ್ಟ್​ ಸಿಕ್ಕಿದೆ.

‘ಧೂಮಂ’ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ಈಗಾಗಲೇ ಟೈಟಲ್​ ಪೋಸ್ಟರ್​ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ನವೆಂಬರ್​​ನಿಂದ ಸಿನಿಮಾ ಶೂಟಿಂಗ್​ ಶುರುವಾಗಲಿದ್ದು ಫ್ಯಾನ್ಸ್​ ಸಿಕ್ಕಾಪಟ್ಟೆ ಕಾತರರಾಗಿದ್ದಾರೆ. ಎನಿವೇ ಹೊಂಬಾಳೆ ಧೂಮಂ ಅಂಡ್​​​​ ಟೀಮ್​ಗೆ ಆಲ್​ ದಿ ಬೆಸ್ಟ್​​​

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES