Wednesday, January 22, 2025

ತಗ್ಗೋದೆ ಇಲ್ಲ ಡೈಲಾಗ್​​​​​​ ಸೀಕ್ರೆಟ್​​​​​ ರಿವೀಲ್​ ಮಾಡಿದ ಅಲ್ಲು ಅರ್ಜುನ್​​.!

ಬೆಂಗಳೂರು: ಸೌತ್​​ ಸಿನಿದುನಿಯಾದ ಗತ್ತು ಗೈರತ್ತನ್ನು ದುಪ್ಟಟ್ಟು ಮಾಡಿದ ಪ್ಯಾನ್​ ಇಂಡಿಯಾ ಸಿನಿಮಾಗಳು ಪುಷ್ಪ, ಆರ್​ಆರ್​ಆರ್​​​, ಕೆಜಿಎಫ್​​, ಬಾಹುಬಲಿ. ಈ ಮೂಲಕ ಪ್ಯಾನ್​ ಇಂಡಿಯಾ ಅಂದ್ರೆ ಬಾಲಿವುಡ್​ ಅಂತಾ ಮೂಗು ಮುರಿತಿದ್ದ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಇದೀಗ ಮತ್ತೊಮ್ಮೆ ಅಲ್ಲು ಸೈಮಾದಲ್ಲಿ ಗುಡುಗಿದ್ದು ಎಲ್ಲರನ್ನೂ ಎಚ್ಚರಿಸೋ ಕೆಲಸ ಮಾಡಿದ್ದಾರೆ.

ಸೈಮಾ, ಫಿಲ್ಮ್​ ಫೇರ್​​ ಅವಾರ್ಡ್​​ ಫಂಕ್ಷನ್​​ಗಳು ಸಿಲಿಕಾನ್​ ಸಿಟಿಯನ್ನು ಹರಸಿ ಬಂದಿದ್ದು ಕನ್ನಡದ ಹೆಮ್ಮಯೇ ಸರಿ. ದುಬೈ, ಮಲೇಶಿಯಾ, ಚೆನ್ನೈಗಳಿಗೆ ಪ್ರಶಸ್ತಿ ಹರಸಿ ಹೋಗುತ್ತಿದ್ದ ಕನ್ನಡ ಕಲಾವಿದರು ಕೊನೆಯ ಸಾಲಿನಲ್ಲಿ ಕೂತು ಎದ್ದು ಬರ್ತಿದ್ರು. ಇದೀಗ ದೊಡ್ಡ ದೊಡ್ಡ ಸಮಾರಂಭಗಳಿಗೂ ಬೆಂಗಳೂರು ಹೆಬ್ಬಾಗಿಲಾಗಿದೆ. ಕನ್ನಡದ ಸ್ಟಾರ್​ ನಟರು ಎಲ್ಲರಿಗಿಂತ ಮಿಂಚ್ತಿದ್ದಾರೆ.

ಇತ್ತೀಚೆಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಮಾ ಸಮಾರಂಭ ರಂಗೇರಿತ್ತು. ಈ ವೇದಿಕೆಯಲ್ಲಿ ಅಲ್ಲು ಅರ್ಜುನ್​ ಕೊಟ್ಟ ಸಂದೇಶ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿತ್ತು. ಬೆಸ್ಟ್​ ಆ್ಯಕ್ಟರ್​ ಅವಾರ್ಡ್​​ ಸ್ವೀಕರಿಸಿ ಮಾತನಾಡಿದ ಅಲ್ಲು ಅರ್ಜುನ್​​​ ಸಕ್ಸಸ್​ ಸೀಕ್ರೇಟ್​ ಬಿಚ್ಚಿಟ್ಟರು.

ಪ್ಯಾನ್​ ಇಂಡಿಯಾ ಆಂದ್ರೆ ಹಿಂದಿ ಸಿನಿಮಾ ಎಂದುಕೊಂಡಿದ್ದವ್ರಿಗೆ ಅಲ್ಲು ಮಾತು ಖಡಕ್​ ಆಗಿತ್ತು. ಸ್ಯಾಂಡಲ್​ವುಡ್​​, ಬಾಲಿವುಡ್​​​​​, ಟಾಲಿವುಡ್​ ಅಂತಾ ಇಲ್ಲ. ಹೀಗೆಲ್ಲಾ ಎಲ್ಲರು ಕೊಲಾಬರೇಷನ್​ ಆಗಿದ್ದೇವೆ. ನಾವೆಲ್ಲಾ ಒಂದೇ. ದಿಸ್​ ಇಸ್​​ ಇಂಡಿಯನ್​ ಸಿನಿಮಾ ಎಂದ್ರು.

ಈ ಬಾರಿಯ ಸೈಮಾ ಅಪ್ಪು ಅವರ ಸ್ಮರಣೆಯಲ್ಲಿ ಜರುಗಿತು. ಸ್ಯಾಂಡಲ್​ವುಡ್​​​ನಿಂದ ಶಿವಣ್ಣ, ರಾಕಿಭಾಯ್​ ಸೇರಿದಂತೆ ಸೌತ್​​ ಸಿನಿದುನಿಯಾದ ಕಮಲ್​ ಹಾಸನ್​​, ಬಾಲಿವುಡ್​​​ ಕಮಲ್​ ಹಾಸನ್​​​ ಮುಂತಾದವ್ರು ಪಾಲ್ಗೊಂಡಿದ್ರು. ಏನೇ ಇರಲಿ ಭಾರತೀಯ ಚಿತ್ರರಂಗವನ್ನು ಒಂದೇ ಮನೆಯಂತೆ ನೋಡುವ ಪರಿಕಲ್ಪನೆಗೆ ಮುನ್ನಡಿ ಬರೆದ ಅಲ್ಲು ಅರ್ಜುನ್​ಗೆ ಹ್ಯಾಟ್ಸಪ್​​​​​.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES