Sunday, December 22, 2024

ಮಾಲ್ಡೀವ್ಸ್​ನಲ್ಲಿ ರಶ್ಮಿಕಾ- ದೇವರಕೊಂಡ ಸೀಕ್ರೆಟ್ ಡೇಟಿಂಗ್

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ವಾ..? ಯೆಸ್​​​​​.. ಇಷ್ಟು ದಿನ ತೆರೆ ಮರೆಯಲ್ಲೇ ಲವ್​ ಮಾಡ್ತಿದ್ದ ರಶ್ಮಿಕಾ, ವಿಜಯ್​ ದೇವರಕೊಂಡ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಮಾದ್ಯಮಗಳ ಪ್ರಶ್ನೆಗೆ ನಯವಾಗಿ ಜಾರಿಕೊಳ್ಳುತ್ತಿದ್ದ ಕ್ಯೂಟ್​ ಜೋಡಿ ಪ್ರೇಮ ಪ್ರಸಂಗ ಬಹಿರಂಗವಾಗಿದೆ. ಗೀತಗೋವಿಂದನ ಹೊಸ ಲೀಲೆ ಏನ್​ ಗೊತ್ತಾ..? ನೀವೇ ಓದಿ.

  • ಕಡಲ ಕಿನಾರೆಯಲ್ಲಿ ಪ್ರಣಯ ಪಕ್ಷಿಗಳ ಲವ್ವಿ ಡವ್ವಿ ರಿವೀಲ್​​​..!

ಬಣ್ಣದ ಲೋಕ ಅಂದ್ಮೇಲೆ ಅಲ್ಲಿ ಗಲ್ಲಿ ಗಾಸಿಪ್​ಗಳು ಮಾಮೂಲು ಅನ್ನೋದು ಎಲ್ರಿಗೂ ಗೊತ್ತು. ಆದ್ರೇ ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ ಅಲ್ವಾ..? ಶ್ರೀವಲ್ಲಿ ರಶ್ಮಿಕಾಳ ಬಿಂಕ ಬಿನ್ನಾಣಕ್ಕೆ ಮರುಳಾಗದವ್ರೇ ಇಲ್ಲ. ಯಾರ ಬಲೆಗೂ ಬೀಳದ ಚೆಂದುಳ್ಳಿ ಚೆಲುವೆ ರಶ್ಮಿಕಾ, ಹ್ಯಾಂಡ್ಸಮ್​ ಹುಡುಗ ವಿಜಯ್​ ದೇವರಕೊಂಡನಿಗೆ ಥಟ್​​ ಅಂತಾ ಬಿದ್ದು ಬಿಟ್ರು. ಆದ್ರೆ, ಇವರಿಬ್ರ ಲವ್​​ಸ್ಟೋರಿ ಬಗ್ಗೆ ಇಬ್ರೂ ಕನ್ಫರ್ಮ್​ ಮಾಡಿರಲಿಲ್ಲ. ಇದೀಗ, ಇಬ್ರ ಗಪ್​​ಚುಪ್​ ಸ್ಟೋರಿ ಬಹಿರಂಗವಾಗಿದೆ.

ಗುಟ್ಟಾಗಿ ಲವ್​ ಮಾಡ್ತಿದ್ದ ರಶ್ಮಿಕಾ, ವಿಜಯ್​​ ಪ್ಯಾರ್​ ಕಹಾನಿ ಪಾಪಾರಾಜಿಗಳ ಫೋಟೋಗಳಲ್ಲಿ ಬಯಲಾಗಿದೆ. ಯೆಸ್​​.. ಇತ್ತೀಚೆಗೆ ಈ ಪ್ರೇಮ ಪಕ್ಷಿಗಳು ಏರ್​​ಪೋರ್ಟ್​​ನಲ್ಲಿ ಮಾಲ್ಡೀವ್ಸ್​ಗೆ ಹಾರೋ ಪ್ಲಾನ್​ ಮಾಡಿದ್ವು. ಕೊನೆಗೂ ಸಿಕ್ಕಿಬಿದ್ದ ಈ ಮುದ್ದು ಪಕ್ಷಿಗಳ ಪ್ರೇಮಕಥೆಯ ಸಿಕ್ರೇಟ್​ ರಿವೀಲ್​ ಆಗಿತ್ತು. ಇದೀಗ ಈ ಪ್ರೇಮಕಥೆಗೆ ಸಾಕ್ಷಿಯಾಗಿ ಮಾಲ್ಡೀವ್ಸ್​​​ನ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಯೆಸ್​​​.. ಮಾಲ್ಡೀವ್ಸ್​​​ ಕಡಲ ಕಿನಾರೆಯಲ್ಲಿ ರಶ್ಮಿಕಾ ಬ್ಲಾಕ್​​​ ಸನ್​ ಗ್ಲಾಸ್​​​ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸ್ತಿದ್ದಾರೆ. ವಿಷ್ಯ ಇರೋದು ಇಲ್ಲೇ. ಈ ಇಬ್ರೂ ಕೂಡ ಒಟ್ಟಿಗಿರೋ ಫೋಟೋ ಶೇರ್​ ಮಾಡದಿದ್ರು, ಚಾಲಕಿ ಅಭಿಮಾನಿಗಳು ಮಾತ್ರ ಒಟ್ಟಿಗಿರೋದನ್ನು ಕನ್ಫರ್ಮ್​ ಮಾಡಿದ್ದಾರೆ. ಏರ್​ಪೋರ್ಟ್​ನಲ್ಲಿ ವಿಜಯ್​ ಧರಿಸಿದ್ದ ಬ್ಲಾಕ್​​ ಕೂಲಿಂಗ್​ ಗ್ಲಾಸ್​​​ ರಶ್ಮಿಕಾ ಹಾಕಿದ್ದಾರೆ. ಇಷ್ಟು ಸಿಕ್ಕಿದ್ದೆ ತಡ ಸೋಶಿಯಲ್​ ಮೀಡಿಯಾಗಳಲ್ಲಿ ಈ ಜೋಡಿಯ ಲವ್ವಿ ಡವ್ವಿ ಸಖತ್​ ಟ್ರೋಲ್​ ಆಗ್ತಿದೆ.

ರಶ್ಮಿಕಾ ನನ್ನ ಡಾರ್ಲಿಂಗ್​​. ಅವಳು ನನ್ನ ನಿಜವಾದ ಸ್ನೇಹಿತೆ. ಅವಳ ನನ್ನ ರಿಲೇಷನ್​ ಶಿಪ್​ ಗಾಢವಾದದ್ದು ಎಂದಿದ್ದ ವಿಜಯ್​ ಕೊನೆಗೂ ತಮ್ಮ ಪ್ರೇಮ ಪುರಾಣವನ್ನು ಮುಚ್ಚಿಡೋಕೆ ಸಾದ್ಯವಾಗಿಲ್ಲ. ಅಂತೂ ಇಲ್ಲಿವರೆಗೂ ಇದ್ದಿದ್ದ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಿದ್ದು ಸದ್ಯದಲ್ಲೇ ಮದ್ವೆ ಬಗ್ಗೆ ಗುಡ್​ನ್ಯೂಸ್​ ಸಿಗೋ ಸಾಧ್ಯತೆಯೂ ಇದೆ. ಅಥ್ವಾ, ಹೀಗೆ ಲಿವಿಂಗ್​ ಟುಗೆದರ್​ನಲ್ಲೇ ಈ ಜೊಡಿ ಇದ್ರೂ ಅಚ್ಚರಿ ಏನಿಲ್ಲ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES