Monday, December 23, 2024

ಚೆಂದದ ನಾಡಿನ ಹೊನ್ನಿನ ಗಣಿ ಅಪ್ಪುವಿನ ಈ ‘ಗಂಧದಗುಡಿ’

ಗಲ್ಲಿಯಿಂದ ದಿಲ್ಲಿವರೆಗೂ ಅಪ್ಪು ಗಂಧದಗುಡಿಯ ಆರ್ಭಟ ಝೇಂಕರಿಸಿದೆ. ದೇವತಾ ಮನುಷ್ಯನ ಟ್ರೈಲರ್​ ಕಂಡು ಫ್ಯಾನ್ಸ್​​​​ ಬಾವುಕರಾಗಿದ್ದಾರೆ. ಜೀವಮಾನದ ವಿಶೇಷ ಜರ್ನಿ ಸವಿಯಲು ಕ್ಷಣಗಣನೆ ಶುರುವಾಗಿದೆ. ಗಂಧದ ಗುಡಿ ಟ್ರೈಲರ್​​​​ ಸಖತ್​​​ ಪ್ರಾಮಿಸಿಂಗ್​ ಆಗಿದ್ದು ಯ್ಯುಟ್ಯೂಬ್​​ನಲ್ಲಿ ಹಲ್​ಚಲ್​ ಎಬ್ಬಿಸ್ತಿದೆ. ಯೆಸ್​​​.. ಗಂಧದ ಗುಡಿ ಚಿತ್ರದ ಸ್ಪೆಷಲ್​ ಅಪ್ಡೇಟ್ಸ್​​ ಇಲ್ಲಿದೆ.

ಸ್ಟಾರ್​ ನಟರ ಸಮ್ಮುಖದಲ್ಲಿ ಅದ್ಧೂರಿ ಪ್ರೀ ರಿಲೀಸ್​ ಇವೆಂಟ್​​​

ಮೋದಿ ಮೆಚ್ಚಿದ ಕರುನಾಡ ರತ್ನನ ಗಂಧದಗುಡಿ ಟ್ರೈಲರ್..!

ಇಲ್ಲಿವರೆಗೂ ಐ ಕಾಂಟ್​ ವೆಯ್ಟ್​ ಅಂತಿದ್ದ ಅಪ್ಪು ಅಭಿಮಾನಿಗಳು ದೇವಸ್ವರೂಪಿಯ ಕೊನೆಯ ಸಿನಿಮಾದ ಟ್ರೈಲರ್​​ಗೆ ಕ್ಲೀನ್​ಬೋಲ್ಡ್​ ಅಗಿದ್ದಾರೆ. ವನಸಿರಿಯ ನಡುವೆ ಅಪ್ಪು ಟ್ರಾವೆಲಿಂಗ್​​ ನಯನ ಮನೋಹರವಾಗಿದೆ. ಇಡೀ ದೊಡ್ಮನೆ ಕುಟುಂಬದ ಸಮ್ಮುಖದಲ್ಲಿ ನರ್ತಕಿ ಥಿಯೇಟರ್​​ನಲ್ಲಿ ಗಂಧದಗುಡಿ ಟ್ರೈಲರ್​ ಲಾಂಚ್​ ಆಯ್ತು. ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಟ್ರೈಲರ್​​​​​ ಸೋಶಿಯಲ್​ ಮೀಡಿಯಾಗಳಲ್ಲಿ ಟಾಪ್​ ಟ್ರೆಂಡಿಂಗ್​​ ಕ್ರಿಯೇಟ್​ ಮಾಡಿದೆ.

ಡಾಕ್ಯುಮೆಂಟರಿ ಆಗಬೇಕಿದ್ದ ಚಿತ್ರ ಸಿನಿಮಾವಾಗಿ ತೆರೆಗೆ ಬರೋಕೆ ತಯಾರಾಗಿದೆ. ಚಿತ್ರದ ಟ್ರೈಲರ್​​ನಲ್ಲಿ ಕರ್ನಾಟಕದ ಪ್ರೇಕ್ಷಣೀಯ ನಿಸರ್ಗಧಾಮಗಳೊಂದಿಗೆ ಅಪ್ಪು ಅಪ್ಪುಗೆ ಅವಿಸ್ಮರಣೀಯವಾಗಿದೆ. ಕಾಡು, ಮೇಡು, ಜಲಪಾತ, ಪ್ರಾಣಿ ಪಕ್ಷಿಗಳ ಜತೆ ರಾಜರತ್ನ ಪಿಸುಮಾತನ್ನಾಡಿದ್ದಾರೆ. ಟ್ರೈಲರ್​​​ ರಿಲೀಸ್​ ಮಾಡಿ ಮಾತನಾಡಿದ ದೊಡ್ಮನೆ ಕುಟುಂಬ ಅಪ್ಪು ಡ್ರೀಮ್ ಪ್ರಾಜೆಕ್ಟ್​ ಮಿಸ್​ ಮಾಡದೆ ನೋಡಿ ಎಂದ್ರು.

ಕೋಟ್ಯಂತರ ಅಭಿಮಾನಿಗಳು ಮುತ್ತು ಸನ್​ ಆಫ್​​ ಮುತ್ತುರಾಜನನ್ನು ಹೆಗಲ ಮೇಲೆ ಹೊತ್ತು ಮೆರೆಯೋಕೆ ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಇನ್ನೇನಿದ್ರು ಕರುನಾಡಿನಲ್ಲಿ ಅಪ್ಪು ಜಯಘೋಷಗಳು ಎಲ್ಲೆಡೆ ಮೊಳಗಲಿವೆ. ಇದ್ರ ಜತೆಗೆ ಗಂಧದಗುಡಿ ಚಿತ್ರದ ಪ್ರೀರಿಲೀಸ್​ ಇವೆಂಟ್​​ಗೆ ಭರ್ಜರಿ ಪ್ಲಾನ್​ ನಡಿತಿದೆ. ರಜನಿಕಾಂತ್​​, ಅಮಿತಾಭ್​​​ ಸೇರಿದಂತೆ ಬಿಗ್​ ಸ್ಟಾರ್​ಗಳ ಸಮಾಗಮದಲ್ಲಿ ನಡೆಯಲಿದೆ. ಈಗಾಗ್ಲೇ ಮೋದಿ ಟ್ವೀಟ್​​ ಮಾಡಿ ಚಿತ್ರಕ್ಕೆ ವಿಶ್​ ಮಾಡಿದ್ದಾರೆ.

ಪಿಆರ್​ಕೆ ಪ್ರೊಡಕ್ಷನ್​​ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದ್ದು ಸಿನಿರಸಿಕರು ಸಿಕ್ಕಾಪಟ್ಟೆ ಕಾತರರಾಗಿದ್ದಾರೆ. ನಿರ್ದೇಶಕ ಅಮೋಘವರ್ಷ ಕೂಡ ಅಪ್ಪು ಸಹಚರನಾಗಿ ಇಡೀ ಕರುನಾಡಿನ ಪ್ರಕೃತಿಯೊಂದಿಗೆ ಒಡನಾಟ ಮಾಡಿದ್ದಾರೆ. ಒಟ್ಟಾರೆ ಇದೇ ತಿಂಗಳ ಅಕ್ಟೋಬರ್​ 21ಕ್ಕೆ ಪ್ರಿ ರಿಲೀಸ್​ ಇವೆಂಟ್​​​​ ಅದ್ಧೂರಿಯಾಗಿ ನಡೆಯಲಿದೆ. ಈಗಾಗ್ಲೇ ಅಪ್ಪು ಹಸ್ತಾಕ್ಷರದ ಇನ್​​​​ವೈಟೇಷನ್​ ವುಡೆನ್​ ಬಾಕ್ಸ್​​​ ಕುತೂಹಲ ಕೆರಳಿಸಿದೆ. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಗಂಧದಗುಡಿ ಸಿನಿಮಾ ಎಂಜಾಯ್​ ಮಾಡೋ ಭರವಸೆ ಮೂಡಿಸಿದೆ.

ರಾಕೇಶ್​ ಆರುಂಡಿ., ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES