Friday, May 17, 2024

ರಂಗೇರಿದ ಫಿಲ್ಮ್​ಫೇರ್..  ಕನ್ನಡ ಚಿತ್ರರಂಗಕ್ಕೆ ನಾನಿ ಮೆಚ್ಚುಗೆ

ಇಡೀ ಚಿತ್ರರಂಗದ ಹಾದಿಯನ್ನೇ ಬದಲಾಯಿಸಿದ ಕೆಜಿಎಫ್​​ ಸಿನಿಮಾ ಸ್ಯಾಂಡಲ್​​ವುಡ್​​ನ ಚಹರೆಯನ್ನೂ ಬದಲಿಸಿದೆ. ಪರಭಾಷೆಯ ಸ್ಟಾರ್​​​ ಕಲಾವಿದ್ರೂ ಕನ್ನಡ ಸಿನಿಮಾಗಳ ಬಗ್ಗೆ ಹಾಡಿ ಕೊಂಡಾಡ್ತಿದ್ದಾರೆ. 2022ರ ಫಿಲ್ಮ್​ ಫೇರ್​​ ಅವಾರ್ಡ್​​ ಫಂಕ್ಷನ್​​​ ಬೆಂಗಳೂರಿನಲ್ಲಿ ರಂಗೇರಿತ್ತು. ಸೌತ್​​ ಸೂಪರ್ ಸ್ಟಾರ್​​ ಕಲಾವಿದ್ರು ರೆಡ್​​​ ಕಾರ್ಪೆಟ್​ ಮೇಲೆ ಮಿಂಚಿದ್ರು. ಯೆಸ್​​​.. ಯಾರೆಲ್ಲಾ ಪ್ರಶಸ್ತಿ ಪಡೆದ್ರೂ ಬೀಗಿದ್ರು..? ಹೇಗಿತ್ತು ರಂಗೀನ್​ ಲೋಕ ಅಂತೀರಾ..? ನೀವೇ ಓದಿ.

  • ಕಾಂತಾರ ಚಿತ್ರದ ಬಗ್ಗೆಯೂ ಗರ್ವದಿಂದ ನಾನಿ ಗುಣಗಾನ..!

ಇದೇ ಮೊದಲ ಬಾರಿಗೆ 67ನೇ ಫಿಲ್ಮ್​ ಫೇರ್​ ಪ್ರಶಸ್ತಿ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಕನ್ನಡ, ತಮಿಳು, ತೆಲುಗು, ಕನ್ನಡ ಸೇರಿದಂತೆ ಮಲಯಾಳಂನ ಸ್ಟಾರ್​ ನಟ, ನಟಿಯರು ಚಂದದ ಉಡುಗೆಯಲ್ಲಿ ಮಿಂಚಿದ್ರು. ರಮೇಶ್​​​ ಅರವಿಂದ್​​, ಧೂದ್​​ ಪೇಡಾ ದಿಗ್ಗಿ ನಿರೂಪಣೆಯಲ್ಲಿ ಕಾರ್ಯಕ್ರಮದ ರಂಗು ದುಪ್ಪಟ್ಟಾಗಿತ್ತು. 2020-21 ರ ಬೆಸ್ಟ್​ ಸಿನಿಮಾಗಳಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಶಸ್ತಿ ನೀಡಲಾಯ್ತು.

ರೆಡ್​​ ಕಾರ್ಪೆಟ್​​​ ಮೇಲೆ ಕಲರ್​​​ಫುಲ್​​​​ ಡ್ರೆಸ್​ ತೊಟ್ಟು ನಟ ನಟಿಯರ ಎಂಟ್ರಿ ಡಿಫರೆಂಟ್​ ಆಗಿತ್ತು. ಕನ್ನಡದ ಡಾಲಿ, ರಾಜ್​ ಬಿ.ಶೆಟ್ಟಿ, ಅಮೃತಾ, ಐಂದ್ರಿತಾ ರೈ. ಕಾಲಿವುಡ್​​ನ ಸೂರ್ಯ, ಪಶುಪತಿ. ಟಾಲಿವುಡ್​ನಿಂದ ಅಲ್ಲು ಅರ್ಜುನ್​​, ಸುಕುಮಾರ್​​​, ಜಾನಿ ಮಾಸ್ಟರ್​​​​​​​, ಕೃತಿ ಶೆಟ್ಟಿ, ಸಾಯಿ ಪಲ್ಲವಿ. ಮಲಯಾಳಂನ ಬಿಜು ಮೆನನ್​ ಸೇರಿದಂತೆ ಮುಂತಾದ ಸ್ಟಾರ್​ ಕಲಾವಿದ್ರು ಭಾಗವಹಿಸಿದ್ರು.

ಕನ್ನಡದ ಬಡವ ರಾಸ್ಕಲ್​ ಚಿತ್ರಕ್ಕೆ ಡಾಲಿ ಧನಂಜಯ ಬೆಸ್ಟ್ ಆ್ಯಕ್ಟರ್​​ ಪ್ರಶಸ್ತಿ ಬಾಚಿದ್ರೆ, ತೆಲುಗಿನಲ್ಲಿ ಪುಷ್ಪ ಚಿತ್ರಕ್ಕೆ ಅಲ್ಲು ಅರ್ಜುನ್​ ಬೆಸ್ಟ್​ ಆ್ಯಕ್ಟರ್​​ ಅವಾರ್ಡ್​ ಬಾಚಿಕೊಂಡ್ರು. ಈ ನಡುವೆ ಶ್ಯಾಮ್​ ಸಿಂಘ ರಾಯ್​​ಗಾಗಿ ಬೆಸ್ಟ್​​ ಆ್ಯಕ್ಟರ್ ಅವಾರ್ಡ್​ ಸ್ವೀಕರಿಸಿ ಮಾತನಾಡಿದ ನಾನಿ ಕನ್ನಡ ಇಂಡಸ್ಟ್ರಿ ಬಗ್ಗೆ ಮನಸಾರೆ ಕೊಂಡಾಡಿದ್ರು.

ಯೆಸ್​​​​.. ಇತ್ತೀಚೆಗೆ ಕನ್ನಡ ಚಿತ್ರಗಳ ಬಗ್ಗೆ ಇಡೀ ಇಂಡಿಯಾ ಮಾತನಾಡ್ತಿದೆ. ಇದಕ್ಕೆ ಹೊರತಾಗಿ ನಾನಿ ಕೂಡ ಕನ್ನಡ ಚಿತ್ರಗಳಿಗೆ ಬಹುಪರಾಕ್​ ಎಂದ್ರು. ಏನ್​ ಸಿನಿಮಾ ಮಾಡ್ತೀದಿರಾ ಈಗೀಗ. ಇಡೀ ಇಂಡಿಯಾ ಕನ್ನಡ ಚಿತ್ರಗಳ ಬಗ್ಗೆ ಮಾತನಾಡ್ತಿದೆ. ಕಾಂತಾರ ಸಿನಿಮಾ ಬಗ್ಗೆನೂ ಕೇಳಿದೆ ಸೂಪರಾಗಿದೆ ಎಂದು ವೇದಿಕೆಯ ಮೇಲೆ ಕನ್ನಡ ಸಿನಿಮಾಗಳಿಗೆ ಜೈಕಾರ ಹಾಕಿದ್ರು.

ಅಂತೂ ಕನ್ನಡ ನೆಲದಲ್ಲಿ ಬಿಗ್​ ಅವಾರ್ಡ್​ ಫಂಕ್ಷನ್​ಗಳು ನಡಿತಿವೆ. ನಮ್ಮ ಮನೆಗೆ ಪರಭಾಷೆಯ ಕಲಾವಿದ್ರು ಬಂದು ಪ್ರಶಸ್ತಿಗಳನ್ನು ಬಾಚಿಕೊಂಡು ಹೋಗಿದ್ದಾರೆ. ಇದ್ರ ಜತೆಗೆ ಅಪ್ಪುಗೆ ಜೀವಮಾನದ ಸಾಧನೆ ಪ್ರಶಸ್ತಿ ಲಭಿಸಿದ್ದು ಕಾರ್ಯಕ್ರಮದ ರಂಗನ್ನು ಡಬಲ್​ ಮಾಡ್ತು. ಒಟ್ಟಾರೆ ಈ ಬಾರಿಯ ಫಿಲ್ಮ್​ ಫೇರ್​​​ ಕರುನಾಡಿನ ಕಂಪನ್ನು ದುಪ್ಪಟ್ಟು ಮಾಡ್ತು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES