ಇಡೀ ಚಿತ್ರರಂಗದ ಹಾದಿಯನ್ನೇ ಬದಲಾಯಿಸಿದ ಕೆಜಿಎಫ್ ಸಿನಿಮಾ ಸ್ಯಾಂಡಲ್ವುಡ್ನ ಚಹರೆಯನ್ನೂ ಬದಲಿಸಿದೆ. ಪರಭಾಷೆಯ ಸ್ಟಾರ್ ಕಲಾವಿದ್ರೂ ಕನ್ನಡ ಸಿನಿಮಾಗಳ ಬಗ್ಗೆ ಹಾಡಿ ಕೊಂಡಾಡ್ತಿದ್ದಾರೆ. 2022ರ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ ಬೆಂಗಳೂರಿನಲ್ಲಿ ರಂಗೇರಿತ್ತು. ಸೌತ್ ಸೂಪರ್ ಸ್ಟಾರ್ ಕಲಾವಿದ್ರು ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ರು. ಯೆಸ್.. ಯಾರೆಲ್ಲಾ ಪ್ರಶಸ್ತಿ ಪಡೆದ್ರೂ ಬೀಗಿದ್ರು..? ಹೇಗಿತ್ತು ರಂಗೀನ್ ಲೋಕ ಅಂತೀರಾ..? ನೀವೇ ಓದಿ.
- ಕಾಂತಾರ ಚಿತ್ರದ ಬಗ್ಗೆಯೂ ಗರ್ವದಿಂದ ನಾನಿ ಗುಣಗಾನ..!
ಇದೇ ಮೊದಲ ಬಾರಿಗೆ 67ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಕನ್ನಡ, ತಮಿಳು, ತೆಲುಗು, ಕನ್ನಡ ಸೇರಿದಂತೆ ಮಲಯಾಳಂನ ಸ್ಟಾರ್ ನಟ, ನಟಿಯರು ಚಂದದ ಉಡುಗೆಯಲ್ಲಿ ಮಿಂಚಿದ್ರು. ರಮೇಶ್ ಅರವಿಂದ್, ಧೂದ್ ಪೇಡಾ ದಿಗ್ಗಿ ನಿರೂಪಣೆಯಲ್ಲಿ ಕಾರ್ಯಕ್ರಮದ ರಂಗು ದುಪ್ಪಟ್ಟಾಗಿತ್ತು. 2020-21 ರ ಬೆಸ್ಟ್ ಸಿನಿಮಾಗಳಿಗೆ ಎಲ್ಲಾ ವಿಭಾಗಗಳಲ್ಲೂ ಪ್ರಶಸ್ತಿ ನೀಡಲಾಯ್ತು.
ರೆಡ್ ಕಾರ್ಪೆಟ್ ಮೇಲೆ ಕಲರ್ಫುಲ್ ಡ್ರೆಸ್ ತೊಟ್ಟು ನಟ ನಟಿಯರ ಎಂಟ್ರಿ ಡಿಫರೆಂಟ್ ಆಗಿತ್ತು. ಕನ್ನಡದ ಡಾಲಿ, ರಾಜ್ ಬಿ.ಶೆಟ್ಟಿ, ಅಮೃತಾ, ಐಂದ್ರಿತಾ ರೈ. ಕಾಲಿವುಡ್ನ ಸೂರ್ಯ, ಪಶುಪತಿ. ಟಾಲಿವುಡ್ನಿಂದ ಅಲ್ಲು ಅರ್ಜುನ್, ಸುಕುಮಾರ್, ಜಾನಿ ಮಾಸ್ಟರ್, ಕೃತಿ ಶೆಟ್ಟಿ, ಸಾಯಿ ಪಲ್ಲವಿ. ಮಲಯಾಳಂನ ಬಿಜು ಮೆನನ್ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದ್ರು ಭಾಗವಹಿಸಿದ್ರು.
ಕನ್ನಡದ ಬಡವ ರಾಸ್ಕಲ್ ಚಿತ್ರಕ್ಕೆ ಡಾಲಿ ಧನಂಜಯ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಬಾಚಿದ್ರೆ, ತೆಲುಗಿನಲ್ಲಿ ಪುಷ್ಪ ಚಿತ್ರಕ್ಕೆ ಅಲ್ಲು ಅರ್ಜುನ್ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಾಚಿಕೊಂಡ್ರು. ಈ ನಡುವೆ ಶ್ಯಾಮ್ ಸಿಂಘ ರಾಯ್ಗಾಗಿ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಸ್ವೀಕರಿಸಿ ಮಾತನಾಡಿದ ನಾನಿ ಕನ್ನಡ ಇಂಡಸ್ಟ್ರಿ ಬಗ್ಗೆ ಮನಸಾರೆ ಕೊಂಡಾಡಿದ್ರು.
ಯೆಸ್.. ಇತ್ತೀಚೆಗೆ ಕನ್ನಡ ಚಿತ್ರಗಳ ಬಗ್ಗೆ ಇಡೀ ಇಂಡಿಯಾ ಮಾತನಾಡ್ತಿದೆ. ಇದಕ್ಕೆ ಹೊರತಾಗಿ ನಾನಿ ಕೂಡ ಕನ್ನಡ ಚಿತ್ರಗಳಿಗೆ ಬಹುಪರಾಕ್ ಎಂದ್ರು. ಏನ್ ಸಿನಿಮಾ ಮಾಡ್ತೀದಿರಾ ಈಗೀಗ. ಇಡೀ ಇಂಡಿಯಾ ಕನ್ನಡ ಚಿತ್ರಗಳ ಬಗ್ಗೆ ಮಾತನಾಡ್ತಿದೆ. ಕಾಂತಾರ ಸಿನಿಮಾ ಬಗ್ಗೆನೂ ಕೇಳಿದೆ ಸೂಪರಾಗಿದೆ ಎಂದು ವೇದಿಕೆಯ ಮೇಲೆ ಕನ್ನಡ ಸಿನಿಮಾಗಳಿಗೆ ಜೈಕಾರ ಹಾಕಿದ್ರು.
ಅಂತೂ ಕನ್ನಡ ನೆಲದಲ್ಲಿ ಬಿಗ್ ಅವಾರ್ಡ್ ಫಂಕ್ಷನ್ಗಳು ನಡಿತಿವೆ. ನಮ್ಮ ಮನೆಗೆ ಪರಭಾಷೆಯ ಕಲಾವಿದ್ರು ಬಂದು ಪ್ರಶಸ್ತಿಗಳನ್ನು ಬಾಚಿಕೊಂಡು ಹೋಗಿದ್ದಾರೆ. ಇದ್ರ ಜತೆಗೆ ಅಪ್ಪುಗೆ ಜೀವಮಾನದ ಸಾಧನೆ ಪ್ರಶಸ್ತಿ ಲಭಿಸಿದ್ದು ಕಾರ್ಯಕ್ರಮದ ರಂಗನ್ನು ಡಬಲ್ ಮಾಡ್ತು. ಒಟ್ಟಾರೆ ಈ ಬಾರಿಯ ಫಿಲ್ಮ್ ಫೇರ್ ಕರುನಾಡಿನ ಕಂಪನ್ನು ದುಪ್ಪಟ್ಟು ಮಾಡ್ತು.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ