Wednesday, January 22, 2025

ರಿಲೀಸ್​ಗೂ ಮೊದ್ಲೇ ಚಾಂಪಿಯನ್ ಆದ ಆರ್ಮಿ ಮ್ಯಾನ್..!

ಉತ್ತರ ಕರ್ನಾಟಕದ ಜವಾರಿ ಪ್ರತಿಭೆ ಸಚಿನ್​ ಧನ್​ಪಾಲ್​ ಹಾಗೂ ಅದಿತಿ ಪ್ರಭುದೇವ ಅಭಿನಯದ ಮೊಸ್ಟ್​ ಎಕ್ಸ್​​​​ಪೆಕ್ಟೆಡ್​ ಸಿನಿಮಾ ಚಾಂಪಿಯನ್​. ಈಗಾಗ್ಲೇ ಸಿನಿಮಾದ ಟ್ರೈಲರ್​​ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದ್ದು, ಸನ್ನಿಯ ಡಿಂಗರಬಿಲ್ಲಿ ಹಾಡು ಮ್ಯಾಜಿಕ್​ ಮಾಡ್ತಿದೆ. ನಟ ಸಚಿನ್​​​ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದು, ಪವರ್​ ಟಿವಿ ಜತೆ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.

  • ಯ್ಯುಟ್ಯೂಬ್​​ನಲ್ಲಿ ಸೆನ್ಷೇಷನ್​​ ಕ್ರಿಯೇಟ್​​​​ ಮಾಡಿದ ಡಿಂಗರಬಿಲ್ಲಿ

ಸ್ಪೋರ್ಟ್ಸ್ಸ್​​ ಓರಿಯೆಂಟೆಡ್​​​​​​ ಸಿನಿಮಾ ಚಾಂಪಿಯನ್​​​​ ಈಗಾಗ್ಲೇ ಚಿತ್ರರಸಿಕರಲ್ಲಿ ಕ್ಯೂರಿಯಾಸಿಟಿ ಮೂಡಿಸಿದೆ. ಉತ್ತರ ಕರ್ನಾಟಕದ ಪ್ರತಿಭೆ ಸಚಿನ್​ ಧನಪಾನ್​ ಸಿಕ್ಕಾಪಟ್ಟೆ ಹಾರ್ಡ್​ ವರ್ಕ್​ ಮಾಡಿ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಟ್ರೈಲರ್​ನಲ್ಲಿ ನಾಯಕನ ಡೆಡಿಕೇಷನ್​ ಎದ್ದು ಕಾಣ್ತಿದೆ. ಈಗಾಗ್ಲೇ ಸಿನಿಮಾ ನೆಕ್ಸ್ಟ್​​ ಲೆವೆಲ್​​ ಪ್ರಮೋಷನ್ಸ್​ ಮಾಡ್ತಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

ಬಾಲಿವುಡ್​ ನೀಲಿ ತಾರೆ ಸನ್ನಿಲಿಯೋನ್​​ ಚಾಂಪಿಯನ್ ಚಿತ್ರದಲ್ಲಿ ಸೊಂಟ ಬಳುಕಿಸಿದ್ದಾರೆ. ಡಿಂಗರಬಿಲ್ಲಿ ಬಿಂದಾಸ್​ ಹಾಡಿಗೆ ಪಡ್ಡೆ ಹೈಕಳು ಬಾಯಿ ಬಿಟ್ಟಿದ್ದಾರೆ. ಮಿಲ್ಕಿ ಬ್ಯೂಟಿ ಸನ್ನಿಯ ಡಿಂಗರಬಿಲ್ಲಿ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಹಿಟ್ಸ್​ ದಾಖಲಿಸಿದೆ. ಒಟ್ಟಾರೆ ಸಿನಿಮಾ ಸಖತ್ ಪ್ರಾಮಿಸಿಂಗ್​ ಆಗಿ ಮೂಡಿ ಬಂದಿದ್ದು ಸಿಲ್ವರ್​​​​ ಸ್ಕ್ರೀನ್​ ಮೇಲೆ ಕಮಾಲ್​​ ಮಾಡೋ ನಿರೀಕ್ಷೆ ಮೂಡಿಸಿದೆ.

ಶಿವಾನಂದ್​​ ನೀಲಣ್ಣವರ್​​ ಸ್ನೇಹಿತನಿಗಾಗಿ ದೊಡ್ಡ ಕನಸು ಕಂಡಿದ್ದು ನಿರ್ಮಾಪಕನಾಗಿ ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ. ಶಾಹುರಾಜ ಶಿಂಧೆ ನಿರ್ದೇಶನದಲ್ಲಿ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆಯಂತೆ. ಜತೆಗೆ ಪವರ್​ ಟಿವಿಯಲ್ಲಿ ಸಚಿನ್​ ಧನ್​ಪಾಲ್​​​ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದು ಉತ್ತರ ಕರ್ನಾಟಕದ ಹುಡುಗನಾಗಿ ಬಹಳಷ್ಟು ಕನಸು ಹೊತ್ತು ಬಂದಿದ್ದೇನೆ. ದಯವಿಟ್ಟು ಬೆಳೆಸಿ ಪ್ರೋತ್ಸಾಹಿಸಿ ಎಂದ್ರು.

ಚಾಂಪಿಯನ್​​ನಲ್ಲಿ ಸ್ಟಾರ್​ ಕಲಾವಿದರ ಸಮಾಗಮವಿದ್ದು ಡೈನಾಮಿಕ್​ ಸ್ಟಾರ್​ ದೇವರಾಜ್​, ರಂಗಾಯಣ ರಘು, ಶೋಭರಾಜ್​, ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ. ಈ ವಾರ ತೆರೆಗೆ ಬರಲಿರೋ ಚಾಂಪಿಯನ್​​ ಪ್ರೇಕ್ಷಕರ ಮನಸ್ಸನ್ನು ಸೆಳೆಯೋ ತವಕದಲ್ಲಿದೆ. ಕನ್ನಡದ ಹಿಟ್ಸ್​​ ಸಿನಿಮಾಗಳ ನಡುವೆ ಹೊಸ ನಾಯಕನಿಗೆ ಪ್ರೇಕ್ಷಕ ಯೆಸ್​​ ಅಂತಾನಾ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES