Thursday, December 26, 2024

BJP ಭದ್ರ ಕೋಟೆಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ

ಚಿತ್ರದುರ್ಗ : ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆಸುವ ಮೂಲಕ ಬಿ. ಸಿ.ನಾಗೇಶ್, ಜೆ.ಸಿ.ಮಾದುಸ್ವಾಮಿಗೆ ಸ್ವಕ್ಷೇತ್ರದಲ್ಲೇ ಶಕ್ತಿ ಪ್ರದರ್ಶಿಸಿದ್ರು. ಚಿಕ್ಕನಾಯಕನಹಳ್ಳಿ ಗೆ ಬಂದು ತಲುಪಿದ್ದ ಯಾತ್ರೆ ಅಲ್ಲಿಂದ ಮುಂದೆ ಸಾಗಿತ್ತು. ಪಾದಯಾತ್ರೆ ‌ಆರಂಭವಾಗುತ್ತಿದ್ದಂತೆ ರಾಹುಲ್‌ಗಾಂಧಿ ನೋಡಲು ಜನ ಕಾದುಕುಳಿತಿದ್ರು. ರಾಹುಲ್ ಗಾಂಧಿ ಜೊತೆ ಡಿ.ಕೆ.ಶಿವಕುಮಾರ್, ಪರಮೇಶ್ವರ್, ವೇಣುಗೋಪಾಲ, ಕೆ.ಎನ್.ರಾಜಣ್ಣ ಸೇರಿ ಹಲವು ಮುಖಂಡರು ಹೆಜ್ಜೆ ಹಾಕಿದ್ರು. ಹಾಗೇ ಮುಂಜಾನೆಯೇ ವಿವಿಧ ಕಲಾ ತಂಡದಿಂದ ವೀರಗಾಸೆ, ಗೊರವಯ್ಯ ನೃತ್ಯ, ಕೋಲಾಟದ ಮೂಲಕ ರಾಹುಲ್‌ಗೆ ಸ್ವಾಗತ ಕೋರಿದ್ರು.

ಸಿದ್ದರಾಮಯ್ಯ- ಡಿ‌.ಕೆ.ಶಿವಕುಮಾರ್‌ ನಡುವಿನ ವೈಮಸ್ಸು ಶಮನ ಆಯ್ತು ಅನ್ನುವಾಗಲೇ ಬೆಂಬಲಿಗರ ಟಾಂಗ್‌ ಗಳು ಆರಂಭವಾಗುತ್ತಲೇ ಇರುತ್ತದೆ. ಹೀಗಾಗಿ ‌ಸಿದ್ದು‌- ಡಿ‌ಕೆ ಇಬ್ರು ಒಂದಾಗಿ ಹೋರಾಡಿದ್ರೆ ಮಾತ್ರ ಅಧಿಕಾರ ಅನ್ನೋದು ಮಾತು ಸತ್ಯ. ಹೀಗಾಗಿ ಡಿಕೆ.ಶಿವಕುಮಾರ್‌ ಹಾಗು ಸಿದ್ದರಾಮಯ್ಯ ಅವ್ರನ್ನ ರಾಹುಲ್ ಗಾಂಧಿ ಬ್ಯಾಲೆನ್ಸ್ ‌ಮಾಡಬೇಕಾಗಿದೆ. ಹೀಗಾಗಿ ಚಿಕ್ಕನಾಯಕನಹಳ್ಳಿ ಪುರದ ಮಠದ ಪಾದಯಾತ್ರೆ ‌ವೇಳೆ ಡಿ‌ಕೆಶಿ ಕೈಗೆ ಕಾಂಗ್ರೆಸ್ ಭಾವುಟ ಕೊಟ್ಟು ರಾಹುಲ್ ರನ್ನಿಂಗ್‌ಮಾಡಿದ್ದಾರೆ.

ಇನ್ನು ಪಾದಯಾತ್ರೆಯಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಾ ಕಣ್ಣಿರು ಹಾಕಿದ್ರು. ಹುಳಿಯಾರ ರಸ್ತೆಯಲ್ಲಿ ಕೆರೆ ಏರಿ‌ ಮೇಲೆ ನೂರಾರು ಜನ ನಿಂತು ರಾಹುಲ್ ಗಾಂಧಿಯತ್ತ ಕೈ ಬೀಸಿದ್ರು. ಹೀಗಾಗಿ ಜನರನ್ನು ಮಾತಾಡಿಸುತ್ತಾ ಕೆರೆ ಏರಿಯನ್ನ ಹತ್ತಿ ಅವರ ಜೊತೆ ಪೋಸ್ ಕೊಟ್ಟು ಜನರೊಂದಿಗೆ ಹೆಜ್ಜೆ ಹಾಕಿದ್ರು.

ಪಾದಯಾತ್ರೆಯ ಲಂಚ್ ಬ್ರೇಕ್‌ನಲ್ಲಿ ಹಿರಿಯೂರಿನಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ, ಎಸ್ಪಿ ವರಿಷ್ಟ ಮುಲಾಯಂ ಸಿಂಗ್ ಯಾದವ್‌ಗೆ ಶೃದ್ದಾಂಜಲಿ ಸಲ್ಲಿಸಿದ್ರು. ಹಾಗೆಯೇ ಪುತ್ರ ಅಖಿಲೇಶ್ ಯಾದವ್‌ಗೆ ಕರೆ ಮಾಡಿ ಸಾಂತ್ವನ ಹೇಳಿದ್ರು

ಇಂದಿನ ಪಾದಯಾತ್ರೆಯ ಹಿರಿಯೂರಿನಲ್ಲಿ ಸಾಗಿ ಬಿಜೆಪಿ ಶಾಸಕರಿರೋ ಈ ಕ್ಷೇತ್ರದಲ್ಲೂ ಜನಸಾಗರದ ಮೂಲಕ ಕಾಂಗ್ರೆಸ ಶಕ್ತಿ ಪ್ರದರ್ಶನ ಮಾಡಿತು. ಮುಂದೆ ಸಾಗಿ ಚಿತ್ರದುರ್ಗ, ಬಳ್ಳಾರಿಯಲ್ಲೂ ಸಂಚಲನ ಉಂಟು ಮಾಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಪಾದಯಾತ್ರೆ ಗೆ ಮುಂದೆ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೊದನ್ನ ಕಾದುನೋಡಬೇಕಿದೆ

ರೂಪೇಶ್ ಬೈಂದೂರು ಪವರ್ ಟಿವಿ ಚಿತ್ರದುರ್ಗ

RELATED ARTICLES

Related Articles

TRENDING ARTICLES