Wednesday, January 22, 2025

ವಿದ್ಯಾಗಿರಿಯಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ

ಬಾಗಲಕೋಟೆ :  ನಗರದ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿ​ನಲ್ಲಿ ಬಾಹ್ಯಾಕಾಶ ಮತ್ತು ಸುಸ್ಥಿರತೆ ಧ್ಯೇಯವಾಕ್ಯದೊಂದಿಗೆ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಸಪ್ತಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲು ಇಸ್ರೋದಿಂದ 4 ತಂಡಗಳನ್ನು ರೂಪಿಸಲಾಗಿತ್ತು. ಹೀಗಾಗಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇಸ್ರೋದಿಂದ 8 ಜನ ವಿಜ್ಞಾನಿಗಳು ಆಗಮಿಸಿದ್ರು. ಈ ಕಾರ್ಯಕ್ರಮದ ಲಾಭ ಪಡೆಯಲೆಂದೇ ಸಾವಿರಕ್ಕೂ ಅಧಿಕ ಶಾಲಾ ಮಕ್ಕಳು ಭಾಗವಹಿಸಿದ್ರು. ಬಂದಂತಹ ಮಕ್ಕಳಿಗೆ 30ಕ್ಕೂ ಅಧಿಕ ಬಗೆಯ ಬಾಹ್ಯಾಕಾಶ ಮತ್ತು ಸುರಕ್ಷತೆ ಕುರಿತ ಪ್ರದರ್ಶನಗಳ ಮಾಹಿತಿ ನೀಡಲಾಗುತ್ತಿತ್ತಂತೆ. ಅತ್ತ ವಿಜ್ಞಾನಿಗಳು ಪ್ರತಿಯೊಂದು ಬಾಹ್ಯಾಕಾಶ ಸಾಧನೆ ಕುರಿತ ಮಾಹಿತಿಯನ್ನು ಪ್ರಯೋಗ ಸಮೇತ ವಿವರಿಸುತ್ತಿದ್ದರೆ ವಿದ್ಯಾರ್ಥಿಗಳು ತದೇಕಚಿತ್ತವಾಗಿ ನೋಡಿ ವಿಷಯವನ್ನ ಅರಿಗಿಸಿಕೊಳ್ಳುತ್ತಿದ್ದರು.

ಇನ್ನು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳ ಮಕ್ಕಳು ವಿಜ್ಞಾನಿಗಳ ಬಗ್ಗೆ ಪುಸ್ತಕದಲ್ಲಿ ಓದಿಕೊಂಡಿರ್ತಾರೆ. ಆದ್ರೆ, ಮುಖಾಮುಖಿಯಾಗಿ ವಿಜ್ಞಾನಿಗಳ ಭೇಟಿಗೆ ಅವಕಾಶ ಸಿಕ್ಕಿರೋದಿಲ್ಲ, ಅವರೊಂದಿಗೆ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಗಿರೋದಿಲ್ಲ, ಆದ್ರೆ ಇಂದಿನಿ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ನೇರವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ವಿದ್ಯಾರ್ಥಿಗಳಿಗೆ ಖುಷಿ ತರಿಸಿತು.

ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ ಯಶಸ್ವಿಯಾಗುವುದರ ಜೊತೆಗೆ ಶಾಲಾ ಮಕ್ಕಳಿಗೆ ಖುಷಿಕೊಟ್ಟಿದ್ದು, ಭವಿಷ್ಯದಲ್ಲಿ ಆ ಮಕ್ಕಳು ದೇಶದ ಸಾಧಕ ವಿಜ್ಞಾನಿಗಳಾಗಿ ಬೆಳಗಲಿ ಅನ್ನೋದೆ ಎಲ್ಲರ ಆಶಯ.

ನಿಜಗುಣ ಮಠಪತಿ, ಪವರ್ ಟಿವಿ, ಬಾಗಲಕೋಟೆ

RELATED ARTICLES

Related Articles

TRENDING ARTICLES