Monday, December 23, 2024

ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ವಿಧಿವಶ

ಉತ್ತರ ಪ್ರದೇಶ : ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮುಲಾಯಂ ಸಿಂಗ್‌ ವಿಧಿವಶರಾಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಆಗಸ್ಟ್‌ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಮುಲಾಯಂ, 3 ಬಾರಿ ಮುಖ್ಯಮಂತ್ರಿಯಾಗಿದ್ದರು. ಮುಲಾಯಂ ಸಿಂಗ್‌, ಉತ್ತರಪ್ರದೇಶದ ಮಾಜಿ ಸಿಎಂ ಸಮಾಜವಾದಿ ಪಕ್ಷದ ನಾಯಕರಾಗಿದ್ದರು.

ಅದಲ್ಲದೇ, ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಮುಲಾಯಂ. 1996-98ರ ಅವಧಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿದ್ದರು. ಉತ್ತರಪ್ರದೇಶದ ಇಟಾವಾ ಜಿಲ್ಲೆ ಸೈಫೈ ಗ್ರಾಮದಲ್ಲಿ ಜನಿಸಿದ್ದ ಮುಲಾಯಂ. 1939 ನವೆಂಬರ್‌ 22ರಂದು ಜನಿಸಿದ್ದ ಅವರು, ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದರು. 10 ಬಾರಿ ಶಾಸಕ, 7 ಬಾರಿ ಸಂಸದರಾಗಿದ್ದ ಮುಲಾಯಂ ಉತ್ತರ ಪ್ರದೇಶದ ಜಶ್ವಂತ್‌ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 1993ರಲ್ಲಿ 2ನೇ ಬಾರಿ ಸಿಎಂ ಆಗಿದ್ದರು.

RELATED ARTICLES

Related Articles

TRENDING ARTICLES