Wednesday, January 22, 2025

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಮೈಸೂರು : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಅಕ್ಟೋಬರ್​​​​ 3ರಂದು ಮೈಸೂರಿನ ಕಾವೇರಿ ಆಸ್ಪತ್ರೆ ಬಳಿಯ ರಸ್ತೆ ಅಪಘಾತದಲ್ಲಿ ಯುವಕನೋರ್ವ ತೀವ್ರವಾಗಿ ಗಾಯಗೊಂಡಿದ್ದನು. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಮದನ್ ಬದುಕುಳಿಯಲಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಮದನ್ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾನೆ.

ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಈ ಯುವಕನ ಕುಟುಂಬಸ್ಥರು ಮದನ್​ನ ಕಣ್ಣು, ಹೃದಯ, ಕಿಡ್ನಿಯನ್ನು ಅಪೋಲೋ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಆತನ ಕುಟುಂಬಸ್ಥರು ದೇಹದ ವಿವಿಧ ಭಾಗಗಳನ್ನು ದಾನ ಮಾಡಿ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆಯುವಂತೆ ಮಾಡಿದ್ದಾರೆ. ಇನ್ನು ಅಪಘಾತದ ದೃಶ್ಯ CCTVಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಸಿದ್ಧಾರ್ಥ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES