Wednesday, January 22, 2025

9 ಮಂದಿಯನ್ನ ಬಲಿ ಪಡೆದಿದ್ದ ಹುಲಿಯನ್ನು ಗುಂಡಿಕ್ಕಿ ಕೊಂದ ಅರಣ್ಯ ಇಲಾಖೆ

ಬಿಹಾರ; ಈ ವರ್ಷದ ಮೇ ತಿಂಗಳಿನಿಂದ ಇಲ್ಲಿವರೆಗೂ 9 ಜನರನ್ನು ಕೊಂದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ ನಡೆದಿದೆ.

ಬಿಹಾರ ಸರ್ಕಾರ ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಶೂಟ್ ಔಟ್​ ಮಾಡಲು ಆದೇಶ ಹೊರಡಿಸಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ನರಭಕ್ಷಕ ಹುಲಿಯನ್ನ ಗುಂಡಿಕ್ಕಿ ಹೊಡೆದುರುಳಿಸಿದ್ದಾರೆ.

ಹುಲಿಯ ಸೆರೆಗೆ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು, ಆಧುನಿಕ ರೈಫಲ್‌ಗಳೊಂದಿಗೆ ಪ್ರಮಾಣೀಕೃತ ಶೂಟರ್‌ಗಳು ಮತ್ತು 150 ಅನುಭವಿ ಫಾರೆಸ್ಟ್ ಗಾರ್ಡ್‌ಗಳು ನಿರಂತರವಾಗಿ ಕೆಲಸ ಮಾಡುದರು. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಕಳೆದ 27 ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಹುಲಿಯನ್ನು ಕೊಲ್ಲಲಾಗಿದೆ. ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ಅಗತ್ಯ ಕಾನೂನು ವಿಧಿವಿಧಾನಗಳನ್ನು ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಟಿಆರ್‌ನ ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ನೇಶಮಣಿ ಕೆ ಹೇಳಿದರು.

RELATED ARTICLES

Related Articles

TRENDING ARTICLES