ಬೆಂಗಳೂರು : ಎಸ್ ಸಿ ಸಮುದಾಯಕ್ಕೆ 15% ಯಿಂದ 17%, ಎಸ್ ಟಿಗೆ 3% ಯಿಂದ 7% ಗೆ ಏರಿಕೆ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತಿನ ಜಯಂತೋತ್ಸವ ಬಂಗಾರದ ಪೆನ್ನಲ್ಲಿ ಬರೆಯಬೇಕಾದ ಜಯಂತೋತ್ಸವ. ಇದೊಂದು ಐತಿಹಾಸಿಕ ದಿನ, ಐತಿಹಾಸಿಕ ನಿರ್ಧಾರ, ಅನೇಕ ದಶಕಗಳಿಂದ ಹೋರಾಟ ಮಾಡ್ತಿದ್ವಿ. ದ್ವಾರಪಯುಗದಲ್ಲಿ ಕೆಳ ವರ್ಗದ ಪರವಾಗಿ ಶ್ರೀರಾಮ ಚಂದ್ರ ನಿಂತಿದ್ದ. ಕಲಿಯುಗದಲ್ಲಿ ಸಿಎಂ ಬೊಮ್ಮಾಯಿ ನಮ್ಮ ಪರವಾಗಿ ಇದ್ದಾರೆ ಎಂದರು.
ಇನ್ನು, ವಾಲ್ಮೀಕಿ ಜಯಂತಿ ಸರ್ಕಾರಿ ಜಯಂತಿಯಾಗಿ ಘೋಷಿಸಿದ್ದು ಬಿಜೆಪಿ, ಆಗಿನ ಸಿಎಂ ಯಡಿಯೂರಪ್ಪ ಸರ್ಕಾರಿ ಜಯಂತಿಯನ್ನಾಗಿ ಮಾಡಿದ್ರು, ವಾಜಪೇಯಿ ಪ್ರಧಾನಿಯಾಗಿದ್ದಾಗ ಎಸ್ ಸಿ, ಎಸ್ ಟಿ ಪ್ರತ್ಯೇಕ ಸಚಿವಾಲಯ ಮಾಡಿದ್ರು, ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಕೊಡುವಂತ ಕೆಲಸ ಮಾಡಿದ್ದು ಬೊಮ್ಮಾಯಿ. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೊದಲ ಮಂತ್ರಿ ನನ್ನನ್ನು ಮಾಡಿದ್ದಾರೆ. ಅನೇಕ ಸರ್ಕಾರಗಳು ಬಂದ್ವು, ಹೋದ್ವು, ವರದಿಗಳನ್ನ ತರಿಸಿಕೊಂಡ್ರು. ಆದರೆ ಅವರು ಯಾರು ನಮಗೆ ಮೀಸಲಾತಿ ಕೊಡಲಿಲ್ಲ ಎಂದರು.