Wednesday, January 22, 2025

ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿ ಮಾಡಿದ ನಿರ್ಮಲಾ ಸೀತಾರಾಮನ್.!

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆನ್ನೈನ ಮೈಲಾಪುರ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನು ಖರೀದಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಈ ಬಗ್ಗೆ ಎಎನ್​ಐ ಸುದ್ದಿಸಂಸ್ಥೆ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಯಿಂದ ತರಕಾರಿಗಳನ್ನು ಖರೀದಿ ಮಾಡಿ ಕೆಲವು ಮಾರಾಟಗಾರರ ಜೊತೆಗೆ ಮಾತನಾಡಿದರು. ಅಲ್ಲದೇ. ನಿರ್ಮಲಾ ಸೀತಾರಾಮನ್​ ಅವರು ಏನನ್ನು ಖರೀದಿಸಬೇಕು ಎಂದು ಯೋಚಿಸಿ ಕೆಲವು ಸಿಹಿ ಆಲೂಗಡ್ಡೆಗಳನ್ನು ಆರಿಸಿ ತೆಗೆದುಕೊಂಡರು.

ಚೆನ್ನೈಗೆ ಭೇಟಿಯ ಸಮಯದಲ್ಲಿ, ಹಣಕಾಸು ಸಚಿವರು ಮೈಲಾಪುರ್ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿದರು. ಅಲ್ಲದೇ, ವ್ಯಾಪಿರಿಗಳ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದರು ಎಂದು ಹಣಕಾಸು ಸಚಿವರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ. ಈ ಬಗ್ಗೆ ರಿಟ್ವೀಟ್​ ಮಾಡಿದ ಕೆಲವರು ಭಾರತದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ ಕಿಡಿಕಾರುತ್ತಿದ್ದಾರೆ.

RELATED ARTICLES

Related Articles

TRENDING ARTICLES