Monday, December 23, 2024

ಅಪ್ಪು ಟ್ರೈಲರ್​ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ.!

ಬೆಂಗಳೂರು: ರಾಜ್ಯದ ವಿವಿಧ ಶಾಲೆಗಳಿಗೆ, ಅನಾಥ ಆಶ್ರಮಗಳಿಗೆ ಹೀಗೆ ಹಲವು ರೀತಿಯಲ್ಲಿ ಪರೋಕ್ಷವಾಗಿ ಒಂದಿಲ್ಲೊಂದು ಸಹಾಯ ಮಾಡಿದ ಪುನೀತ್​ ಕಾಣದೇ ಮರೆಯಾದರು.

ಅಪ್ಪು ಬಹುನಿರೀಕ್ಷಿತ ಗಂಧದ ಗುಡಿ ಸಿನಿಮಾದ ಟ್ರೈಲರ್​ ಇಂದು ಬೆಂಗಳೂರಿನ ನರ್ತಕಿ ಸಿನಿಮಾ ಮಂದಿರದಲ್ಲಿ ಬಿಡುಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಇಡೀ ರಾಜ್​ ಕುಮಾರ್​ ಕುಟುಂಬವೇ ಭಾಗಿಯಾಯಿತು. ಸ್ಕ್ರೀನ್​ನಲ್ಲಿ ಅಪ್ಪು ಕಂಡು ಸಾವಿರಾರು ಅಭಿಮಾನಿಗಳು ಪುಳಕಗೊಂಡರು.

ಗಂಧದ ಗುಡಿ ಟ್ರೈಲರ್ ಗೆ ರಾಜ್ಯದ ಸಿನಿಮಾ ಮಂದಿ ಅಲ್ಲದೇ, ವಿವಿಧ ರಾಜ್ಯಗಳ ರಾಜಕೀಯ ಮಂದಿ ಟ್ರೈಲರ್​ ನೋಡಿ ಖುಷಿ ವ್ಯಕ್ತಪಡಿಸಿ ಅಭಿಮಾನಿಗಳ ದೇವರಿಗೆ ಸಲಾಂ ಹೇಳಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೈಲರ್​ ನೋಡಿ ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪ್ಪು ಒಬ್ಬರು ಅಪ್ರತಿಮ ಪ್ರತಿಭಾವಂತ ನಟರು, ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮನಸ್ಸಿನಲ್ಲಿದ್ದಾರೆ.​ ಗಂಧದಗುಡಿ ಟ್ರೈಲರ್​​ ಪ್ರಕೃತಿ ಮಾತೆಗೆ ಅಪರ್ಣೆ ಮಾಡಿದ್ದಾರೆ. ಈ ಟ್ರೈಲರ್​​ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನ ಅಪ್ಪು ಅನಾವರಣಗೊಳಿಸಿದ್ದಾರೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES