ನವದೆಹಲಿ : ವರುಣನ ಆರ್ಭಟ ಮುಂದುವರೆದಿದೆ. ಮಳೆಯ ರಣಾರ್ಭಟಕ್ಕೆ ರಾಷ್ಟ್ರ ರಾಜಧಾನಿ ನಲುಗಿದೆ. ಮಳೆಯು ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು, ಜನ ಹೈರಾಣಾಗಿ ಹೋಗಿದ್ದಾರೆ.
ಮಳೆಗೆ ದೆಹಲಿಯ ರಸ್ತೆಗಳು ಕೆರೆಯಂತಾಗಿದ್ದು, ರಸ್ತೆ ತುಂಬೆಲ್ಲಾ ನೀರು ನಿಂತಿತ್ತು. ಚರಂಡಿ ನೀರು ರಸ್ತೆ ಮೇಲೆ ಹರಿದು, ಜನರು ಕೊಳಚೆ ನೀರಲ್ಲೇ ವಾಹನ ಸಾಗಿಸಬೇಕಾಯಿತು. ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರ ಅಯೋಮಯವಾಗಿತ್ತು. ದೆಹಲಿಯ ರಸ್ತೆ ಮೇಸ್ಸೇತುವೆಯಲ್ಲಿ ಗುಂಡಿ ಬಿದ್ದಿದ್ದು, ನೀರು ಮೇಲಿಂದ ಕೆಳಗೆ ಕಾರಂಜಿಯಂತೆ ಜಿಗಿಯುತ್ತಿದೆ. ಇದು ಮೇಲ್ಸೇತುವೆಯ ಕಳಪೆ ಕಾಮಗಾರಿಯನ್ನು ತೋರಿಸುತ್ತದೆ.
ಇನ್ನು, ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಜಲಪಾತದಂತೆ ಬೀಳುವ ನೀರಿನಲ್ಲಿ ವಾಹನ ನಿಲ್ಲಿಸಿ, ವಾಹನ ವಾಶ್ ಮಾಡಿಕೊಂಡು ಸಾಗಿದ್ವು. ಈ ದೃಶ್ಯವನ್ನು ವಾಹನ ಸವಾರರು ಟ್ವಿಟರ್ನಲ್ಲಿ ಶೇರ್ ಮಾಡಿ, ಸರ್ಕಾರಕ್ಕೆ ಚೀಮಾರಿ ಹಾಕ್ತಿದ್ದಾರೆ.