Wednesday, January 22, 2025

ಶೂ ಒಳಗೆ ಹೆಡೆ ಎತ್ತಿ ನಿಂತ ನಾಗಪ್ಪ

ಮೈಸೂರು : ಮಳೆಗಾಲ ಮುಗಿಯುತ್ತಾ ಬಂದಿದ್ದು, ಚಳಿಗಾಲ ಆರಂಭವಾಗ್ತಿದೆ. ಹಾವುಗಳು ಬೆಚ್ಚಗಿನ ಸ್ಥಳಗಳಲ್ಲಿ ಹೆಜ್ಜೆ ಹಾಕ್ತಿದೆ.

ಮೈಸೂರಿನಲ್ಲಿ ನಾಗಪ್ಪ ಶೂ ಒಳಗೆ ಪ್ರತ್ಯಕ್ಷವಾಗಿದ್ದಾನೆ. ಮೈಸೂರಿನ ಮಹದೇವಪುರ ಬಡವಾಣೆಯಲ್ಲಿ ಮನೆಯ ಮುಂಭಾಗ ಇಟ್ಟಿದ್ದ ಚಪ್ಪಲಿ ಸ್ಟ್ಯಾಂಡ್​ನಲ್ಲಿನ ಶೂ ಒಳಗೆ ನಾಗರಹಾವು ಅಡಗಿ ಕುಳಿತಿದ್ದು, ಶೂ ಧರಿಸುವ ವೇಳೆ ಹೆಡೆ ಎತ್ತಿ ನಿಂತಿದ್ದಾನೆ. ನಾಗಪ್ಪನನ್ನು ಕಂಡು ಮನೆಯವರು ಬೆಚ್ಚಿ ಬಿದ್ದಿದ್ದಾರೆ.

ಸದ್ಯ ಸ್ವಲ್ಪದರಲ್ಲೇ ಮನೆಯವರು ಬಚಾವಾಗಿದ್ದು, ಕೂಡಲೇ ಉರಗ ರಕ್ಷಕ ಸ್ನೇಕ್ ಮಂಜುಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಕ್ ಮಂಜು ನಾಗರಹಾವನ್ನು ರಕ್ಷಿಸಿದ್ದಾರೆ. ಹಾವುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ರೀತಿ ಅನಾಹುತಗಳು ಸಂಭವಿಸಬಹುದು, ಆದ್ದರಿಂದ ಮನೆಯ ಮುಂಭಾಗ ಚಪ್ಪಲಿ ಸ್ಟ್ಯಾಂಡ್ ಅಥವಾ ಶೂಗಳನ್ನ ಇಡುವಾಗ, ಬಳಸುವಾಗ ಎಚ್ಚರದಿಂದಿರಿ ಎಂದು ಸ್ನೇಕ್ ಮಂಜು ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES