Wednesday, January 22, 2025

ಪರಭಾಷೆಯಲ್ಲಿ ‘ಕಾಂತಾರ’ ಟ್ರೈಲರ್​​ ರಿಲೀಸ್​​

ಬಹುಬೇಡಿಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಪ್ರಿಯರು ಮಾತ್ರವಲ್ಲದೇ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಸಹ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ.

ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾ ಇತರೆ ಭಾಷೆಗಳಿಗೂ ಡಬ್ಬಿಂಗ್ ಆಗಬೇಕೆಂಬ ಬೇಡಿಕೆ ಬಂದ ಹಿನ್ನೆಲೆ ಪ್ಯಾನ್​ ಇಂಡಿಯಾ ಚಿತ್ರವಾಗಿಸಲು ಕಾಂತಾರ ಚಿತ್ರತಂಡ ಮುಂದಾಗಿದೆ. ಅದರ ಮೊದಲ ಹೆಜ್ಜೆಯಂತೆ ಇಂದು ಬೆಳಗ್ಗೆ 9.10ಕ್ಕೆ ಕಾಂತಾರ ತೆಲುಗು ಮತ್ತು ಹಿಂದಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 14 ರಿಂದ ಹಿಂದಿ ಮತ್ತು ಅಕ್ಟೋಬರ್​ 15 ರಿಂದ ತೆಲುಗು ಅವತರಣಿಕೆಯಲ್ಲಿ ಕಾಂತಾರಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಈ ಮೂಲಕ ಚಿತ್ರವನ್ನು ತಮ್ಮ ಭಾಷೆಯಲ್ಲಿ ನೋಡಬೇಕೆಂದವರಿಗೆ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ.

ತಮಿಳು, ಮಲೆಯಾಳಂ ಭಾಷೆಗಳಲ್ಲೂ ಸಿನಿಮಾ ಮಾಡಲಾಗುವುದು ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಸದ್ಯದಲ್ಲೇ ತಮಿಳು, ಮಲೆಯಾಳಂ ಭಾಷೆಯ ಕಾಂತಾರ ಟ್ರೈಲರ್​ ರಿಲೀಸ್​ ಆಗಲಿದೆ. ಮಲಯಾಳಂ ಚಿತ್ರರಂಗದ ಸ್ಟಾರ್​ ನಟ ಪೃಥ್ವಿರಾಜ್ ಸುಕುಮಾರನ್ ಅವರು ಕಾಂತಾರ ಸಿನಿಮಾವನ್ನು ಮಲಯಾಳಂ ಭಾಷೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.

RELATED ARTICLES

Related Articles

TRENDING ARTICLES