Wednesday, January 22, 2025

ಸ್ಕ್ರೀನ್​ ಮೇಲೆ ಅಪ್ಪು ನೋಡಿ ಪುಳಕಿತರಾದ ಅಭಿಮಾನಿಗಳು

ಬೆಂಗಳೂರು : ಬಹಳ ನಿರೀಕ್ಷೆ ಹುಟ್ಟುಹಾಕಿದ ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೆಯ ಸಿನಿಮಾ ಅಂತು ಇಂತು ಗಂಧದ ಗುಡಿ ಟ್ರೈಲರ್ ಇಂದು ಬೆಳಗ್ಗೆ 10:19 ಕ್ಕೆ ಅಭಿಮಾನಿಗಳ ಮುಂದೆ ದರ್ಶನವಾಯಿತು.

ನಗರದ ನರ್ತಕಿ ಥಿಯೇಟರ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಸಮ್ಮುಖದಲ್ಲಿ ಯುವರತ್ನನ ಕೊನೆಯ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿತು. ಟ್ರೈಲರ್ ಲಾಂಚ್ ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್​ ಭಾಗಿಯಾಗಿದ್ದು, ಅಮೋಘವರ್ಷ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಇನ್ನು, ಪಿ ಆರ್ ಕೆ ಪ್ರೋಡಕ್ಷನ್ ಅಡಿಯಲ್ಲಿ ಅಕ್ಟೋಬರ್ 29 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

RELATED ARTICLES

Related Articles

TRENDING ARTICLES