ದಕ್ಷಿಣ ಆಫ್ರಿಕಾ : ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟ್ ಆಟಗಾರ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ಐಪಿಎಲ್ನ ಗುಜರಾತ್ ಟೈಟನ್ಸ್ ತಂಡದ ಆಟಗಾರ ಡೇವಿಡ್ ಮಿಲ್ಲರ್ ಅವರ ಗೆಳೆಯನ ಪುತ್ರಿ ಆ್ಯನೆ ನಿಧನರಾಗಿದ್ದಾರೆ.
ಆ್ಯನೆ ಅವರನ್ನು ಮಿಲ್ಲರ್ ಹಲವು ಬಾರಿ ಕ್ರಿಕೆಟ್ ಮೈದಾನಕ್ಕೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಸಾವಿಗೀಡಾದ ಆ್ಯನೆ ಅವರನ್ನು ಮಿಲ್ಲರ್ ಮಗಳು ಎಂದು ಹೇಳಲು ಆಗಿತ್ತು. ಆಕೆ ಮಿಲ್ಲರ್ನ ಆಪ್ತ ಸ್ನೇಹಿತನ ಮಗಳು ಎಂದು ಹೇಳಲಾಗಿದೆ.
ಮಿಲ್ಲರ್ ಅವರ ಪುತ್ರಿ ಎಂದೇ ಬಿಂಬಿತವಾಗಿದ್ದ ಆ್ಯನೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಏಕದಿನ ಸರಣಿಯಲ್ಲಿ ಆಡುತ್ತಿರುವಾಗಲೇ ಮಿಲ್ಲರ್ ಅವರ ದತ್ತು ಪುತ್ರಿ ಸಾವನ್ನೊಪ್ಪಿದ ಸುದ್ದಿ ಕೇಳಿ ಸಾಮಾಜಿಕ ಜಾಲತಾಣ ಮೂಲಕ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

ಸಾವಿನ ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನನ್ನ ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ಜೀವನದಲ್ಲಿ ಹಲವು ಕಷ್ಟದ ಹಾದಿಯನ್ನು ಎದುರಿಸಿ ನಗುತ್ತ ಇದ್ದಳು. ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಲವ್ ಯು ರಿಪ್ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 3 ಏಕದಿನ ಪಂದ್ಯಗಳಿಗೆ ಮಿಲ್ಲರ್ ಭಾರತಕ್ಕೆ ಆಗಮಿಸಿದ್ದು, ಈಗಾಗಲೇ ಮೊದಲನೇ ಏಕದಿನ ಪಂದ್ಯವನ್ನ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ನಡೆದ ಭಾರತದ ವಿರುದ್ಧ ನಡೆದಿರುವ ಟಿ-20 ಪಂದ್ಯದಲ್ಲಿ ಮಿಲ್ಲರ್ ಶತಕ ಸಿಡಿಸಿ ಮಿಂಚಿದ್ದರು.
