Sunday, December 22, 2024

ಮೊನ್ನೆ ಅವತಾರ್ ಮಾಸ್ಟರ್.. ಇಂದು ರೇಸರ್ ಜೊತೆ ಯಶ್​​​​​​​..!

ರಾಕಿಭಾಯ್​ ಎಲ್ಲಿ ಇರ್ತಾರೆ..? ಏನ್​ ಮಾಡ್ತಿದಾರೆ..? ನೆಕ್ಸ್ಟ್​​ ಪ್ರಾಜೆಕ್ಟ್​​ ಸಿನಿಮಾ ಯಾವುದು..? ಇದು ಮಾತ್ರ ಮಿಲಿಯನ್​ ಡಾಲರ್​ ಪ್ರಶ್ನೆ. ಇತ್ತೀಚಿನ ರಾಕಿಂಗ್​ ಸ್ಟಾರ್​​ ನಡೆ ನೋಡಿದ್ರೆ, ಸದ್ಯದಲ್ಲೇ ಎಲ್ರೂ ಅಚ್ಚರಿ ಪಡುವಂತ ಗುಡ್​​ನ್ಯೂಸ್​ ಕೊಡೋದ್ರಲ್ಲಿ ನೋ ಡೌಟ್​. ಯೆಸ್​​.. ಅವತಾರ್​ ಸ್ಟಂಟ್​​​ ಮಾಸ್ಟರ್​ ಜತೆಗೆ ಖಲಾಶ್​ ನಿಕಾವೋ ಫೈರಿಂಗ್​​ ಮಾಡಿದ್ದ ರಾಕಿಭಾಯ್​ ಇದೀಗ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಅದೇನ್​ ವಿಷ್ಯ ಅಂತೀರಾ..? ನೀವೇ ಓದಿ.

  • ಹ್ಯಾಮಿಲ್ಟನ್​​ ಜೊತೆಗೆ ರಾಜಾಹುಲಿ ಫೋಟೋ ಸಖತ್​ ವೈರಲ್​​​​​​​​​

ರಾಕಿಂಗ್​ ಸ್ಟಾರ್​ ಯಶ್​​​. ಇಟ್ಸ್​ ನಾಟ್​ ಜಸ್ಟ್​ಎ ನೇಮ್​. ಹೌದು ಕನ್ನಡ ಸಿನಿಲೋಕದ ಚಹರೆಯನ್ನೆ ಬದಲಿಸಿದ ಕ್ರಾಂತಿಕಾರಿ ನಟ. ಇಟ್ಟ ಗುರಿ, ದಿಟ್ಟ ಹೆಜ್ಜೆಯನ್ನು ಎಂದು ಹಿಂದೆ ಇಡದ ಛಲವಾದಿ ಕಲಾವಿದ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಹಾಲುಗಲ್ಲದ ಹ್ಯಾಂಡ್ಸಮ್​ ಯುವಕನಂತಿದ್ದ ರಾಕಿಭಾಯ್​​​​ ಕೆಜಿಎಫ್​​​ ನಂತ್ರ ಹಾಲಿವುಡ್​​​​ ಆ್ಯಕ್ಟನ್​​ ಹೀರೋ ರಾಕ್​​ನಂತಾಗಿದ್ದಾರೆ.

ಇಟಲಿ, ಯುರೋಪ್​​​​, ರೋಮ್​​​ ಯಶ್​​ಗೆ ಪಕ್ಕದ ಮನೆಯಂತಾಗಿವೆ. ಅದ್ಯಾವುದೋ ಬಿಗ್​ ಪ್ರಾಜೆಕ್ಟ್​ ಸಲುವಾಗಿ ಯಶ್​ ಈ ಪಾಟಿ ಅಲೆದಾಟ ನಡಿಸ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಸುಳಿವು ಬಿಟ್ರೆ ಯಾವ ಕ್ಲಾರಿಟಿನೂ ಸಿಗ್ತಿಲ್ಲ. ಸಾವಿರ ಕೋಟಿಯ ಸರದಾರನಿಗೆ ಸರಿದೂಗೋ ಸಿನಿಮಾ ಯಾವುದಪ್ಪಾ ಅಂತಾ ಫ್ಯಾನ್ಸ್​ ಕೂಡ ತಲೆಗೆ ಹುಳ ಬಿಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಅವತಾರ್​ ಸ್ಟಂಟ್​ ಮಾಸ್ಟರ್​​ ಜಾನ್​ ಪೆರ್ರಿ ಜತೆಗೂ ಕಾಣಿಸಿಕೊಂಡು ಎಲ್ಲರ ತಲೆ ಕೆಡಿಸಿದ್ರು ಯಶ್​​​.

  • ಹಾಲಿವುಡ್​​​ ಆ್ಯಕ್ಷನ್​ ಚಿತ್ರಕ್ಕೆ  ರಾಕಿಂಗ್​ ಸ್ಟಾರ್​​​ ಸರ್ಕಸ್​​..!
  • ಅಖಾಡಕ್ಕಿಳಿಯಲು ಮಾಸ್ಟರ್​​​ ಪೀಸ್​​​​​​ ಭರ್ಜರಿ ತಯಾರಿ

ಫಾರ್ಮುಲಾ ಒನ್​ ರೇಸ್​​​​​​ನ ದಂತಕಥೆ, ವಿಶ್ವ ಕಂಡ ಅದ್ಭುತ ರೇಸಿಂಗ್ ಕಿಂಗ್​​​​ ಹ್ಯಾಮಿಲ್ಟನ್​​​​​​. ಸತತ ಏಳು ಬಾರಿ ಚಾಂಪಿಯನ್​ ಪಟ್ಟ ಗಿಟ್ಟಿಸಿರೋ ಹ್ಯಾಮಿಲ್ಟನ್​ನ ಯಶ್​ ಭೇಟಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಯಶ್​ ಹಾಲಿವುಡ್​​ಗೆ ಹಾರೋ ಗ್ರೀನ್​ ಸಿಗ್ನಲ್​ ಕೊಟ್ಟಿವೆ. ಜಾನ್​ ಪೆರ್ರಿ ಜತೆಗೆ ಫೈರಿಂಗ್​​ ಕ್ಲಾಸ್​​​​. ಹ್ಯಾಮಿಲ್ಟನ್​ ಜತೆಗೆ ರೇಸಿಂಗ್​ ಕ್ಲಾಸ್​​. ಹೀಗೆ ತೆರೆ ಮರೆಯ ಭರ್ಜರಿ ತಯಾರಿ ನೋಡಿದ್ರೆ ಹಾಲಿವುಡ್​​ ಅವೆಂಜರ್​​​ ರೇಂಜ್​​​ ಚಿತ್ರಕ್ಕೆ ಯಶ್​​​ ತಯಾರಿ ನಡೆಸಿದಂತಿದೆ.

ಯೆಸ್​​.. ಅಖಾಡಕ್ಕಿಳಿಯೋ ಮುಂಚೆ ಮಿಸ್ಟರ್​ ಪರ್ಫೆಕ್ಟ್ ಆಗ್ತಿದ್ದಾರೆ ರಾಕಿಭಾಯ್​​​. ಚೇಸಿಂಗ್​​, ಫೈಟಿಂಗ್​​, ಶೂಟಿಂಗ್​ ಎಲ್ಲಾ ವಿಭಾಗಗಳಲ್ಲೂ ಪರ್ಫೆಕ್ಟ್​ ಫಿನಿಶರ್​​ ಆಗ್ತಿದ್ದಾರೆ. ಯಶ್​​​​​​ ನೆಕ್ಸ್ಟ್​​​​​ ಪ್ರಾಜೆಕ್ಟ್​ ದಿನಕ್ಕೊಂದು ತಿರುವು ಪಡಿತೀದೆ. ನರ್ತನ್​​​​, ಶಂಕರ್​​​, ರಾಜಮೌಳಿ ಹೀಗೆ ಸಿಕ್ಕ ಸಿಕ್ಕ ಕಡೆ ರಾಕಿಭಾಯ್​ ಹೆಸ್ರು ತಳುಕು ಹಾಕಿಕೊಳ್ತಿದೆ. ಆದ್ರೆ, ಯಶ್​ ಮಾತ್ರ ವಿರಾಜಮಾನವಾಗಿ ವಿಶ್ವ ಪರ್ಯಟನೆ ಮಾಡ್ತಿದ್ದಾರೆ.

ಕೆಜಿಎಫ್ 2​​ ರಿಲೀಸ್​ ಆಗಿ ಆಲ್​ಮೋಸ್ಟ್​​​ ಅರ್ಧ ವರ್ಷವೇ ಉರುಳಿದೆ. ಇದಾದ ನಂತ್ರ ಫ್ಯಾಮಿಲಿ ಅಂತಾ ರಿಲ್ಯಾಕ್ಸ್​ ಮೂಡ್​​​ಗೆ ಜಾರಿದ್ದ ರಾಕಿಭಾಯ್​ ವಿದೇಶ ಪ್ರವಾಸ ಅಂತಾ ಬ್ಯುಸಿಯಾಗಿದ್ರು. ಈ ನಡುವೆ, ಹಾಲಿವುಡ್​​ ದಿಗ್ಗಜರನ್ನ ಮೀಟ್​ ಮಾಡಿ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​​ ಕೊಡ್ತಿರೋ ಯಶ್​​ ತಲೆಯಲ್ಲಿ ಏನ್​ ಓಡ್ತಿದೆ ಗೊತ್ತಾಗ್ತಿಲ್ಲ. ವರ್ಷದ ಕೊನೆಯಲ್ಲಾದ್ರೂ ರಾಜಾಹುಲಿ ಗುಡ್​ ನ್ಯೂಸ್​ ಕೊಡ್ತಾರಾ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ  ​

RELATED ARTICLES

Related Articles

TRENDING ARTICLES