Monday, December 23, 2024

ಮೈಸೂರಿನಲ್ಲಿ ಧೋನಿ ಪ್ರತಿಮೆ; ಮಾಜಿ ಕ್ಯಾಪ್ಟನ್​​​​ ಅಭಿಮಾನಿಗಳು ಕಿಡಿ

ಮೈಸೂರು: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಮೇಣದ ಪ್ರತಿಮೆ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಟ್ವಿಟರ್ ಬಳಕೆದಾರ ಮುಫದ್ದಲ್ ವೋಹ್ರಾ ಅವರು ಈ ಚಿತ್ರವನ್ನು ಹಂಚಿಕೊಂಡಿದ್ದು, ಮೈಸೂರಿನ ಚಾಮುಂಡೇಶ್ವರಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಎಂ.ಎಸ್​ ಧೋನಿ ಅವರ ಮೇಣದ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ಫ್ಯಾನ್ಸ್​ ಕಿಡಿಕಾರುತ್ತಿದ್ದಾರೆ.

ಧೋನಿಯ ಮೇಣದ ಆಕೃತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಅಭಿಮಾನಿಗಳು ಪ್ರತಿಕ್ರಿಯಿಸಿ, ಈ ಪ್ರತಿಮೆಯು ಎಂಎಸ್ ಧೋನಿಯನ್ನು ಹೋಲುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈ ಆಕೃತಿಯು ಧೋನಿಗಿಂತಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್‌ ಅಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಖ್ಯಾತ ಕ್ರಿಕೆಟ್ ಬರಹಗಾರ ಜರೋಡ್ ಕಿಂಬರ್, ಇದು ನನ್ನಿಂದ ದೊಡ್ಡದಾಗಿದೆ ಎಂದು ಬರೆದಿದ್ದಾರೆ. ಅಲ್ಲದೇ, ಈ ಪ್ರತಿಮೆಯಲ್ಲಿ ಧೋನಿ ಅವರಿಗಿಂತ ನಟ ರಣಬೀರ್ ಕಪೂರ್ ರೀತಿಯಲ್ಲಿ ಪ್ರತಿಮೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಭಾರತ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಶೋಯೆಬ್ ಮಲಿಕ್ ವಿಭಿನ್ನ ಕೇಶ ವಿನ್ಯಾಸದೊಂದಿಗೆ ಕಾಣುತ್ತಿದ್ದಾರೆ ಎಂದು ವಿವಿಧ ರೀತಿಯಲ್ಲಿ ಫ್ಯಾನ್ಸ್​ ಪ್ರತಿಮೆಯನ್ನ ಬಣ್ಣಿಸಿದ್ದಾರೆ.

RELATED ARTICLES

Related Articles

TRENDING ARTICLES