Monday, December 23, 2024

ಚಂದ್ರಶೇಖರ ಗುರೂಜಿ ಹತ್ಯೆಗೆ ಅಣ್ಣನ ಮಕ್ಕಳೇ ಕಾರಣವಾ..?

ಹುಬ್ಬಳ್ಳಿ : ಚಂದ್ರಶೇಖರ್ ಗುರೂಜಿ ಹತ್ಯೆಗೆ ಪ್ರಮುಖ ಕಾರಣಗಳಲ್ಲಿ ಮನಸ್ತಾಪ ಸಹ ಒಂದು. ಒಂದೇ ಕುಟುಂಬದಂತಿದ್ದ ಸಿ.ಜೆ.ಪರಿವಾರ ಗ್ರೂಪ್‌ಗೆ ಉಳಿ ಹಿಂಡಿದವರು ಅವರ ಅಣ್ಣನ ಮಕ್ಕಳು. ಹೌದು, ಯಾವಾಗ ಅವರ ಅಣ್ಣನ ಮಕ್ಕಳು ಗುರೂಜಿ ಕಂಪನಿಗೆ ಎಂಟ್ರಿ ಆದ್ರೋ ಆಗ, 2014ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆಗಳು ನಡೆದಿವೆ. ಚಂದ್ರಶೇಖರ ಗುರೂಜಿ ಮತ್ತು ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಅಂತ ಹತ್ಯೆ ಆರೋಪಿ ಮಂಜುನಾಥ ಮರೆವಾಡ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರಂತೆ.

24-06-2019ರಂದು ಮಂಜುನಾಥ ಮರೆವಾಡ ಗುರೂಜಿಗೆ ಮಾಡಿದ್ದ ವಾಟ್ಸ್ ಆ್ಯಪ್ ಮೇಸೆಜ್ ಪವರ್‌ ಟಿವಿಗೆ ಲಭ್ಯವಾಗಿದೆ. ವಾಟ್ಸ್ ಮೆಸೇಜ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿದೆ. ಡಿಯರ್ ಗುರೂಜಿ ಅಂತ ಆರಂಭವಾಗುವ ಸಂದೇಶ. ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ ಎರಡನೇ ತಂದೆಯಾಗಿದ್ದಿರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದ್ವಿ. ಆದರೆ, ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ನೀಡಿದರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದಿರಿ. ಆದರೆ, ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಸ್ಟಾರ್ಟ್ ಮಾಡಿದರು. ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ‌ಅವನತಿ‌ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ವಿ. ಆದರೆ, ನಮ್ಮ ಪಾಲಿನ ಯಮ ಆದ್ರಿ. ನಿಮಗೆ ನಾವು ಏನು ಮಾಡಿದ್ವಿ. ನಮ್ಮ ಕಣ್ಣೀರು ನಿಮ್ಮನ್ನ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೀವಿ ಅಂತ ಮೆಸೇಜ್ ಎಂಡ್ ಆಗುತ್ತದೆ. ಇಷ್ಟು ಮಾತ್ರವಲ್ಲದೆ ಇನ್ನೂ ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ.

ಆದರೆ, ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಇದೇ ಅವರ ಸಾವಿನ ಎಚ್ಚರಿಕೆ ಸಂದೇಶಗಳಾಗಿಬಿಟ್ಟಿವೆ. ಗುರೂಜಿ ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿ ಅಣ್ಣನ ಮಕ್ಕಳು ಎಂಟ್ರಿ ಯಾದ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿಯ ಹತ್ಯೆಗೆ ಕಾರಣವಾಯಿತಾ ಎಂಬುದೇ ಅನುಮಾನವಾಗಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ.

RELATED ARTICLES

Related Articles

TRENDING ARTICLES