Sunday, December 29, 2024

ಅಂಬೇಡ್ಕರ್​ಗೆ ಅಪಮಾನ ಮಾಡಿದವರು ಕಾಂಗ್ರೆಸ್ : ಆರ್​ ಅಶೋಕ್​

ಬೆಂಗಳೂರು : ಮೀಸಲಾತಿ ವಿಚಾರದಲ್ಲಿ ಸಿಎಂ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರ್​ ಅಶೋಕ್​ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಲಾಗಿದೆ. ಮೀಸಲಾತಿ ಹೆಚ್ಚಿಸಲು ನಿನ್ನೆ ಡಿಸೈಡ್ ಆಗಿದೆ. ಹೀಗಾಗಿ ವಿಶೇಷ ಕ್ಯಾಬಿನೆಟ್ ಕರೆದು ಚರ್ಚೆ ಮಾಡಿ ಅಂತಿಮ ಮಾಡ್ತೀವಿ. ಈಗಾಗಲೇ ಮಧ್ಯಪ್ರದೇಶ, ತಮಿಳುನಾಡು, ಕೇರಳದಲ್ಲಿ ಜಾಸ್ತಿ ಇದೆ. ಇದು ಕಾನೂನಾತ್ಮಕವಾಗಿ ತಂದು ಜಾರಿಗೊಳಿಸ್ತೇವೆ ಎಂದರು.

ಇನ್ನು, ಬೇರೆ ರಾಜ್ಯಗಳಲ್ಲಿ ಮೀಸಲಾತಿ ಮಾಡಿರೋದನ್ನ ಜನರು ಸ್ವಾಗತ ಮಾಡಿದ್ದಾರೆ. ನಮ್ಮಲ್ಲೂ ಬೇಡಿಕೆ ಹೆಚ್ಚಿರೋದ್ರಿಂದ ಜಾರಿಗೆ ತರುತ್ತೇವೆ. ನೈನ್ತ್ ಶೆಡ್ಯೂಲ್ ಸಿದ್ದರಾಮಯ್ಯಗೆ ಈಗ ನೆನಪಾಯ್ತಾ.? ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಅದನ್ನ ಡಿಸೈನ್ ಮಾಡಿದ್ದು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಕಾಂಗ್ರೆಸ್. ಅಂಬೇಡ್ಕರ್ ಸತ್ತಾಗ ಅವರಿಗೆ ಹೂಳಲು ಜಾಗವನ್ನೂ ಕೊಡಲಿಲ್ಲ. ಅವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದ್ದವಾಗಿ ನ್ಯಾಯ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES