Monday, December 23, 2024

ಮಾಸ್ಟರ್​​​​​ಪೀಸ್ ‘ಕಾಂತಾರ’ಗೆ ಬಾದ್​​​​ಷಾ ಕಿಚ್ಚ ರಿವ್ಯೂ ರಿಪೋರ್ಟ್

ಕರಾವಳಿಯ ದೇಸಿ ಕಥೆ ಕಾಂತಾರ ಸ್ಯಾಂಡಲ್​ವುಡ್​ನಲ್ಲಿ ಕಮಾಲ್​ ಮಾಡ್ತಿದೆ. ದೇಶ ವಿದೇಶಗಳಲ್ಲೂ ಭರ್ಜರಿ ರೆಸ್ಪಾನ್ಸ್​ ಸಿಗ್ತಿದೆ. ಬಹುದಿನಗಳ ನಂತ್ರ ಕನ್ನಡದ ಚಿತ್ರಕ್ಕೆ ಥಿಯೇಟರ್​ನಲ್ಲಿ ನೂಕು ನುಗ್ಗಲು ಶುರುವಾಗಿದೆ. ಬಾದ್​​​ ಷಾ ಕಿಚ್ಚ ಸುದೀಪ್​ ಕೂಡ ಕಾಂತಾರ ಶಿವಲೀಲೆಗೆ ಮಾರು ಹೋಗಿದ್ದಾರೆ. ಚಿತ್ರಕಥೆಗೆ ಹೃದಯ ತುಂಬಿ ಹೊಗಳಿದ್ದಾರೆ. ಯೆಸ್​​.. ಕಿಚ್ಚನ ಎಕ್ಸ್​​ಕ್ಲೂಸಿವ್​ ರಿವೀವ್ಹ್​ ರಿಪೋರ್ಟ್ ಹೇಗಿದೆ ಗೊತ್ತಾ..? ನೀವೇ ಓದಿ.

  • ಬಾಲಿವುಡ್​​ನಲ್ಲೂ ಅಬ್ಬರಿಸೋಕೆ ಸಜ್ಜಾದ ಕರಾವಳಿಯ ಕೋಲ..!

ರಿಷಭ್​​​ ಶೆಟ್ಟಿ,  ಹೊಂಬಾಳೆ ಕಾಂಬಿನೇಷನ್​​​ನಲ್ಲಿ ಮೋಡಿ ಮಾಡ್ತಿರೋ ಹಿಟ್ ಸಿನಿಮಾ ಕಾಂತಾರ. ಕರಾವಳಿ ಕೋಲ, ಶಿವಲೀಲಾ, ರಿಷಬ್​ ಶೆಟ್ಟಿಯ ಮೈಜಮ್ಮೆನ್ನಿಸೋ ಆ್ಯಕ್ಟಿಂಗ್​​​​ ನೋಡಿದವ್ರು ಅರೆಕ್ಷಣ ಪೆಚ್ಚಾಗಿದ್ದಾರೆ. ಯೆಸ್​​.. ಇದು ಕೇವಲ ಸಿನಿಮಾ ಮಾತ್ರವಲ್ಲ ಇಡೀ ಮನುಕುಲವನ್ನು ಎಚ್ಚರಿಸುವ ಪ್ರಕೃತಿ ಆರಾಧನೆ, ಆಚರಣೆಯ ಸಾಂಕೇತಿಕ ಸಿನಿಮಾ ಕಾಂತಾರ.

ಇಡೀ ಚಿತ್ರರಂಗವೇ ರಿಷಬ್​ ಮೇಕಿಂಗ್​ ಸ್ಟೈಲ್​​ಗೆ ಭೇಷ್​ ಎಂದಿದ್ದಾರೆ. ಕ್ಲೈಮ್ಯಾಕ್ಸ್​ ಸೀನ್​​​​​ಗೆ ಭಾವಪರವಶರಾಗಿದ್ದಾರೆ. ಕೂತಲ್ಲೇ ರೋಮಾಂಚನವಾಗಿದ್ದಾರೆ. ಇದೀಗ ಚಿತ್ರಕ್ಕೆ ಕಿಚ್ಚ ಕೂಡ 100 ಮಾರ್ಕ್ಸ್​​ ಕೊಟ್ಟಿದ್ದು, ಸೂಪರ್​ ಸಿನಿಮಾ ಅಂತಾ ಸೀಲ್​ ಒತ್ತಿದ್ದಾರೆ.

ಯೆಸ್​​​.. ಕರಾವಳಿ ಸ್ಲಾಂಗ್​ನಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್​ ಮಾಡಿದ್ದ ಕಾಂತಾರಾ ಬಾಲಿವುಡ್​​ಗೂ ಎಂಟ್ರಿ ಕೊಡ್ತಿದೆ.  ಅಕ್ಟೋಬರ್​​ 09 ಬೆಳಗ್ಗೆ 09:10 ಕ್ಕೆ ಹಿಂದಿ ಟ್ರೈಲರ್ ಕೂಡ ರಿಲೀಸ್​ ಆಗ್ತಿದೆ. ಇದ್ರ ನಡುವೆ ಸ್ಯಾಂಡಲ್​​ವುಡ್​ ಬಾದ್​ಷಾ ಕಾಂತಾರ ಸಿನಿಮಾ ನೋಡಿ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಚಿತ್ರದ ಕುರಿತು ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

  • ಕಾಂತಾರ ದೃಶ್ಯವೈಭವ ಕಂಡು ಮೂಖವಿಸ್ಮಿತರಾದ ಕಿಚ್ಚ
  • ರಿಷಬ್​​​​​​​, ಅಜನೀಶ್​​​​, ಚಿತ್ರತಂಡಕ್ಕೆ ರೋಣ ಹ್ಯಾಟ್ಸಪ್​​​​..!​

ಮೈನವಿರೇಳಿಸುವ ಕಾಂತಾರ ಸಿನಿಮಾ ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ. ಕಿಚ್ಚ ಕೂಡ ಸಿನಿಮಾ ವೀಕ್ಷಣೆ ಮಾಡಿದ ತಕ್ಷಣ ಚಿತ್ರತಂಡಕ್ಕೆ ವಿಶ್​ ಮಾಡಿದ್ದಾರೆ. ನನ್ನನ್ನು ಈ ಪತ್ರ ಬರೆಯುವಂತೆ ಮಾಡಿದ ಚಿತ್ರತಂಡಕ್ಕೆ ಎಂದು ತಮ್ಮ ಪತ್ರವನ್ನು ಆರಂಭಿಸಿದ್ದಾರೆ. ಕಿಚ್ಚ ಕಾಂತಾರ ಚಿತ್ರತಂಡಕ್ಕೆ ಹ್ಯಾಟ್ಸ್​ ಆಫ್​​ ಹೇಳಿದ್ದಾರೆ. ಚಿತ್ರಕಥೆ, ರಿಷಬ್​​ ಅಭಿನಯ, ಅಜನೀಶ್​​ ಮ್ಯೂಸಿಕ್​​, ಭಕ್ತಿ ಭಾವಗಳ ಅನಾವರಣ ಕಂಡು ರೋಣ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.

ಯೆಸ್​​.. ಕಿಚ್ಚ ಸುದೀಪ್​ ಕಾಂತಾರ ಸಿನಿಮಾ ನೋಡಿ ಫುಲ್​ ಫಿದಾ ಆಗಿದ್ದಾರೆ. ರಿಷಬ್​​​​​​​ಗೆ ಪ್ರೀತಿಯ ಅಪ್ಪುಗೆ ಎಂದು ಹೇಳಿದ್ದಾರೆ. ಜೊತೆಗೆ ಅಜನೀಶ್​​​ ಮ್ಯೂಸಿಕ್​​​ಗೆ ಚಿಲ್​ ಆಗಿರೋ ಸುದೀಪ್​​, ನೀವೂ ನಿಜಕ್ಕೂ ಮೇಷ್ಟ್ರು ಎಂದಿದ್ದಾರೆ.

ಕಾಂತಾರ ಎಲ್ಲವನ್ನೂ ಬೀಟ್​ ಮಾಡಿದೆ. ಇಂತಹ ಕಥೆಗೆ ಸಾಕ್ಷಿಯಾದ ಹೊಂಬಾಳೆ ಬ್ಯಾನರ್​ಗೂ ಧನ್ಯಾವಾದ ತಿಳಿಸಿದ ಕಿಚ್ಚ ಇಡೀ ಚಿತ್ರತಂಡವನ್ನು ಶ್ಲಾಘನೆ ಮಾಡಿದ್ದಾರೆ. ಒಟ್ನಲ್ಲಿ ಕನ್ನಡದಲ್ಲಿ ಕಂಟೆಂಟ್​ ಸಿನಿಮಾಗಳ ಅಬ್ಬರ ಇಡೀ ಇಂಡಸ್ಟ್ರಿಯನ್ನೆ ಸ್ಯಾಂಡಲ್​​ವುಡ್​​​ ಕಡೆ ತಿರುಗಿ ನೋಡುವಂತೆ ಮಾಡಿದೆ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES