ತುಮಕೂರು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ 7 ದಿನಕ್ಕೆ ಕಾಲಿಟ್ಟಿದೆ.
ಇಂದು ಬೆಳ್ಳಂ ಬೆಳಿಗ್ಗೆ ರಾಹುಲ್ ಗಾಂಧಿ ಅವರು ಪಾದಾಯತ್ರೆ ಶುರು ಮಾಡಿದರು. ರಾಹುಲ್ಗೆ ಮಾಜಿ ಸಚಿ ಜಿ ಪರಮೇಶ್ವರ್, ಮಾಜಿ ಶಾಸಕ ಕೆ ರಾಜಣ್ಣ ಸಾಥ್ ನೀಡಿದರು. ಜೆಡಿಎಸ್ ನಿಂದ ಮುನಿಸಿಕೊಂಡ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಪಾದಯಾತ್ರೆಯಲ್ಲಿ ಭಾಗಿಯಾದರು.
ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡು, ಹೆಚ್.ಡಿ.ಕುಮಾರಸ್ವಾಮಿ ಜತೆಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ವಿರುದ್ಧ ಮತದಾನ ಮಾಡಿದ್ದಾರೆ ಎಂದು ಜೆಡಿಎಸ್ ಪಕ್ಷ ಶ್ರೀನಿವಾಸ್ ವಿರುದ್ಧ ಕೆಂಡಕಾರಿತ್ತು.
ಇದಕ್ಕೆ ಆಗ ಮಾತನಾಡಿದ್ದ ಶ್ರೀನಿವಾಸ್ ಅವರು, ಜೆಡಿಎಸ್ ಪಕ್ಷ ಶಾಸಕರ ಸಭೆಗೂ ಆಹ್ವಾನಿಸಿಲ್ಲ. ಸಭೆಗೂ ಕರೆದಿಲ್ಲ. ಆದರೂ ಜೆಡಿಎಸ್‌ಗೆ ಮತ ನೀಡುವುದು ನನ್ನ ಕರ್ತವ್ಯ ಎಂದಿದ್ದರು. ಅಲ್ಲದೇ, ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದಿದ್ದರು.
ಈ ಎಲ್ಲಾ ಬೆಳವಣಿಗೆ ನಂತರ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರು ತುಮಕೂರಿಗೆ ಭಾರತ್ ಜೋಡೊ ಎಂಟ್ರಿಯಾಗುತ್ತಿದ್ದಂತೆ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಜತೆಗೆ ಶ್ರೀನಿವಾಸ್ ಪಾದಾಯತ್ರೆ ಶುರು ಮಾಡಿದರು. ಗುಬ್ಬಿ ಶ್ರೀನಿವಾಸ್ ಅವರನ್ನ ರಾಹುಲ್ ಗಾಂಧಿಗೆ ಜಿ ಪರಮೇಶ್ವರ್ ಪರಿಚಯ ಮಾಡಿಕೊಟ್ಟರು. ಶ್ರೀನಿವಾಸ್ ಜತೆ ರಾಹುಲ್ ಮಾತನಾಡಿಕೊಂಡು ಹೋದರು.