Thursday, January 23, 2025

ಎಲ್ಲೆಲ್ಲೂ ಡಾನ್ ಡಾಲಿ ಖದರ್.. ಹಬೀಬಿ ಐಟಂ ನಂ. ಹಲ್​​​​​​ಚಲ್

ನಟ ಭಯಂಕರ ಡಾಲಿ ಡಾನ್ ಜಯರಾಜ್​ ರೋಲ್​​ನಲ್ಲಿ ಮಿಂಚಲಿರೋ ಸಿನಿಮಾ ಹೆಡ್​​ಬುಷ್​​. ಸದ್ಯ ಈ ಚಿತ್ರದ ಹಾಟ್​ ಹಾಟ್​ ಐಟಂ ಸಾಂಗ್​ ಟ್ರೆಂಡಿಂಗ್​ ಸೆಟ್​ ಮಾಡಿದೆ. ಮೊದಲ ಬಾರಿಗೆ ತೆಲುಗು ಪಿಲ್ಲ ಪಾಯಲ್​ ರಜಪೂರ್​​​ ಗ್ಲಾಮರಸ್​ ಲುಕ್​​ನಲ್ಲಿ ಪಡ್ಡೆ ಹೈಕಳ ಮೈಚಳಿ ಬಿಡಿಸಿದ್ದಾರೆ. ಎಲ್ಲೆಲ್ಲೂ ಹಬೀಬಿ ಹಾಡಿನ ರಂಗಲ್ಲಿ ಯುವಕರು ಮಿಂದೆದ್ದಿದ್ದಾರೆ. ಯೆಸ್​​​.. ಹಬೀಬಿ ಹವಾ ಹೇಗಿದೆ ಗೊತ್ತಾ..? ನೀವೇ ಓದಿ.

  • ನಟ ರಾಕ್ಷಸನ ಕೈಯಲ್ಲಿ ಅರಳಿದ ಹಬೀಬಿ ರೊಮ್ಯಾಂಟಿಕ್​​ ಲೈನ್ಸ್​​​​​​​..!

ಟಗರು ಡಾಲಿಗೆ ಅದ್ಭುತ ಕಲಾವಿದ ಅನ್ಬೇಕೋ, ಹಿಟ್​ ಸಿನಿಮಾ ಕೊಟ್ಟ ನಿರ್ಮಾಪಕ ಅನ್ಬೇಕೋ ಗೊತ್ತಾಗ್ತಿಲ್ಲ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅದ್ಭುತ ಬರಹಗಾರನಾಗಿಯೂ ಡಾಲಿ ಫೇಮಸ್​ ಆಗಿದ್ದಾರೆ. ಕಥೆ ಕವನಗಳ ಮೂಲಕ ಪ್ರೇಮಕವಿಯಾಗಿರೋ ಡಾಲಿ ಐಟಂ ಸಾಂಗ್​ನಲ್ಲೂ ಮ್ಯಾಜಿಕ್​ ಮಾಡಿದ್ದಾರೆ. ಯೆಸ್​.. ಹೆಡ್​ಬುಷ್​ ಚಿತ್ರದಲ್ಲಿ ಐಟಂ ಸಾಂಗ್​ ಬರೆದಿರೋ ಡಾಲಿಯ ಸಾಲುಗಳು ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿವೆ.

ಸ್ಯಾಂಡಲ್​​ವುಡ್​ ಸೇರಿ ಟಾಲಿವುಡ್​​​​​​ನಲ್ಲೂ​​ ಸಿಕ್ಕಾಟಟ್ಟೆ ಬ್ಯುಸಿ ಇರೋ ಡಾಲಿ, ಹೆಡ್​ಬುಷ್​ ಚಿತ್ರದಲ್ಲಿ ಭೂಗತ ಲೋಕದ ಪಾತಕಿ ಡಾನ್​ ಜಯರಾಜ್​ ರೋಲ್​ನಲ್ಲಿ ಅಬ್ಬರಿಸ್ತಿದ್ದಾರೆ. ಕರಾಳ ಜಗತ್ತಿನ ನೈಜ ಚಿತ್ರಣ ಹೆಡ್​​ಬುಷ್​​. ರೌಡಿಗಳ ಅಟ್ಟಹಾಸ ಚಿತ್ರದಲ್ಲಿ ಡಬಲ್​ ಇರಲಿದೆ. ಇದೀಗ ಡಾಲಿ ಗೀಚಿದ ಹಬೀಬಿ ಹಾಡು ಸಖತ್​ ಸೌಂಡ್​ ಮಾಡ್ತಿದೆ. ಖುದ್ದಾಗಿ ಮುದ್ದಾಗಿ ಸರಸಕ್ಕೆ ಸಜ್ಜಾಗಿ ಸಾಲುಗಳು ಸಖತ್​​ ರೊಮ್ಯಾಂಟಿಕ್​ ಆಗಿವೆ.

  • ದುಬೈನಿಂದ ಹೆಡ್​​​​​ಬುಷ್​​​ ಟೀಮ್​ ಬೆಂಗಳೂರಿಗೆ ವಾಪಾಸ್
  • ಚಳಿ ಬಿಡಿಸಿದ ತೆಲುಗು ಪಿಲ್ಲ ರಜಪೂತ್​ ಪಾಯಲ್​ ಡ್ಯಾನ್ಸ್​​​

ಬಡವ ರಾಸ್ಕಲ್​ ಚಿತ್ರದ ಉಡುಪಿ ಹೋಟೆಲ್​ ಮೂಲೆ ಟೇಬಲ್​ ಹಾಡು ಬರೆದಿದ್ದ ಡಾಲಿ ಧಿಡೀರ್​ ಐಟಂ ಸಾಂಗ್​​​ ಮೂಲಕ ಕಿಕ್ಕೇರಿಸಿದ್ದಾರೆ. ಈ ಬಾರಿ ಅವ್ರ ಲೇಖನಿಯಲ್ಲಿ ಮನ್ಮಥ ಮನುಸು ಬಿಚ್ಚಿ ಮಾತಾಡಿದ್ದಾನೆ. ಈ ಹಾಡಿಗೆ ರಜಪೂತ್​​ ಸೊಂಟ ಬಳುಕಿಸಿ ಕಿಚ್ಚು ಹಚ್ಚಿದ್ದಾರೆ. ಪಾಯಲ್​ ಸೌಂದರ್ಯಕ್ಕೆ ಹಾಡಿನ ಸಾಲುಗಳು ಎನರ್ಜಿ ತುಂಬಿವೆ. ನಾ ನಾ ಬಂದೆ ಊವಂತೆ, ಹೆಜ್ಜೇನು ನೀನಂತೆ, ಮುತ್ತಿಟ್ಟು ಮತ್ತೇರಿಸೋ ಡಾಲಿ ಬರಹ ನಶೆಯ ಅಮಲಿನಲ್ಲಿ ಗುಂಗಿಡಿಸುತ್ತದೆ.

ಅಂತೂ ನಟ , ನಿರ್ಮಾಪಕನಾಗಿ ಹೆಸ್ರು ಮಾಡಿರೋ ಡಾಲಿ ಧನಂಜಯ ಲಿರಿಕ್​ ರೈಟರ್​ ಆಗಿಯೂ ಗೆದ್ದಿದ್ದಾರೆ. ಉಪೇಂದ್ರ, ರವಿಚಂದ್ರನ್​ ಸಾಲಿಗೆ ಡಾಲಿ ಧನಂಜಯ ಕೂಡ ಸೇರಿದ್ದಾರೆ. ಇತ್ತೀಚೆಗೆ ದುಬೈಗೆ ಕ್ರಿಕೆಟ್​​​​​​ ಆಡಲು ತೆರಳಿದ್ದ ಡಾಲಿ ವಿಭಿನ್ನವಾಗಿ ಹೆಡ್​ಬುಷ್ ಚಿತ್ರದ ಪ್ರಮೋಷನ್​​ ಮಾಡಿದ್ರು. ಇದೀಗ ಹೆಡ್​​ಬುಷ್​ ಟೀಮ್​ ಬೆಂಗಳೂರು ತಲುಪಿದೆ. ಜತೆಗೆ ಅಂಬಾಸಿಡರ್​ ಕಾರುಗಳು ರೌಡಿಗಳನ್ನು ಅಹ್ವಾನ ಮಾಡಲು ಕಾದು ಕೂತಿದ್ವು.

ಎನಿವೇ, ಹೆಡ್​ಬುಷ್​ ಸಿನಿಮಾ ಇದೇ ತಿಂಗಳು 21ಕ್ಕೆ ರಿಲೀಸ್​ ಆಗ್ತಿದೆ. ಈ ನಡುವೆ, ಚರಣ್​ ರಾಜ್​ ಮ್ಯೂಸಿಕ್​ನಲ್ಲಿ, ಡಾಲಿ ಸಾಹಿತ್ಯದಲ್ಲಿ ಹಬೀಬಿ ಸಾಂಗ್​ ಸೌಂಡ್​ ಮಾಡ್ತಿದೆ. ಶೂನ್ಯ ನಿರ್ದೇಶನದಲ್ಲಿ , ಅಗ್ನಿ ಶ್ರೀಧರ್ ಚಿತ್ರ ಕಥೆಯಲ್ಲಿ ಹೆಡ್​ ಬುಷ್​ ಸಿನಿಮಾ ತೆರೆಗೆ ಬರಲಿದೆ. ರಿಲೀಸ್​ಗೂ ಮುನ್ನವೇ ಸೆನ್ಷೆಷನ್​​ ಕ್ರಿಯೇಟ್​ ಮಾಡಿರೋ ಹೆಡ್​ಬುಷ್​​​ ಅಬ್ಬರ ಸಿಲ್ವರ್​ ಸ್ಕ್ರೀನ್​ ಮೇಲೆ ಹೇಗಿರುತ್ತೆ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ​​

RELATED ARTICLES

Related Articles

TRENDING ARTICLES