Wednesday, January 22, 2025

ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಶ್ರೀಗಳ ಫೋಟೋ ಕಳವು.!

ಚಿತ್ರದುರ್ಗ; ಲೈಂಕಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿರುವ ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರು ಅವರ ಫೋಟೋಗಳ ಅಕ್ಟೋಬರ್​ 5 ರಂದು ತಡರಾತ್ರಿ ಕಳವು ಆಗಿದೆ.

ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಿದ್ದ ವೇಳೆ ಗಣ್ಯರ ಫೋಟೋಗಳು ಹಾಗೂ ಇನ್ನೀತರ ಜತೆಗೆ ಸ್ವಾಮೀಜಿಗಳು ಮಠದ ರಾಜಾಂಗಣದಲ್ಲಿದ್ದ ಇದ್ದ ಸುಮಾರು 47 ಭಾವಚಿತ್ರಗಳು ಅಕ್ಟೋಬರ್​ 5 ರಂದು ಕಳವು ಆಗಿದ್ದು, ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್​​ಜೆಎಮ್​ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠರಿಂದ ಈ ಬಗ್ಗೆ ದೂರು ನೀಡಲಾಗಿದ್ದು, ಅಣ್ಣಾ ಹಜಾರೆ, ದಲಾಯಿಲಾಮ, ಮೇಧಾಪಾಟ್ಕರ್, ಸ್ವಾಮಿ ಅಗ್ನಿವೇಶ್, ಪಿಟಿ ಉಷಾ , ನಾರಾಯಣಮೂರ್ತಿ, ಬಿಎಸ್ವೈ, ಅಮತ್ ಶಾ, ದೇವೇಗೌಡರು ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಮುರುಘಾ ಸ್ವಾಮಿ ಇದ್ದ ಫೋಟೋಗಳು ಕಳವು ಆಗಿದೆ. ಆದರೆ, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸ್ವಾಮೀಜಿ ಅವರ ಫೋಟೋ ಕಳವು ಹಿನ್ನಲೆಯಲ್ಲಿ ಮಠದ ಕೆಲ ನೌಕರರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ವಸ್ತ್ರಮಠ್ ನೀಡಿದ ದೂರು ಆಧರಿಸಿ ಎಫ್​ಐಆರ್​​ ದಾಖಲಿಸಿರುವ ಪೊಲೀಸರು, ಫೋಟೋಗಳನ್ನು ಇಬ್ಬರು ವ್ಯಕ್ತಿಗಳು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES