ಚಿಕ್ಕಮಗಳೂರು : ಇವ್ರು ಗೋವುಗಳ ರಕ್ಷಣೆಗೆ ಪಣ ತೊಟ್ಟ ಆ ಗೋರಕ್ಷಕ. ಹೆಸ್ರು ಮಹಮದ್ ನಾಸೀರ್. ಚಿಕ್ಕಮಗಳೂರು ನಿವಾಸಿ. ಕಾಫಿ ಕ್ಯೂರಿಂಗ್ ನಡೆಸ್ತಿರೋ ಇವ್ರು ಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಿಸಲು ಹೆದ್ದಾರಿ ಪಕ್ಕದಲ್ಲೇ ನಾಲ್ಕೂವರೆ ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಇದರ ಬೆಲೆ ಎರಡು ಕೋಟಿಗೂ ಅಧಿಕ. ಇಂತಹಾ ಜಾಗವನ್ನು ಚಿಕ್ಕಮಗಳೂರಿನ ಸ್ವಾಮಿ ಸಮರ್ಥ ರಾಮದಾಸ ಟ್ರಸ್ಟ್‌ಗೆ ದಾನ ನೀಡಿದ್ದಾರೆ.ಹೇಗೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲವೋ ಅದೇ ರೀತಿ ಗೋವಿನ ಋಣವನ್ನೂ ತೀರಿಸಲು ಸಾಧ್ಯವಿಲ್ಲ. ಗೋಮೂತ್ರ ಕುಡಿಸದಿದ್ದಕ್ಕೆ ತಾಯಿ ದೂರವಾದಳು. ಆ ಋಣವನ್ನು ಗೋವಿಗೆ ನೀಡುತ್ತಿದ್ದೇನೆ.ಗೋವುಗಳ ರಕ್ಷಣೆ ಆಗಬೇಕೆಂದು ಹೇಳಿದ್ದಾರೆ.
ಈಗಾಗಲೇ ಈ ಜಾಗದಲ್ಲಿ ಪಂಚಮುಖಿ ಆಂಜನೇಯ ನಿರ್ಮಾಣಕ್ಕೆ ಪೂಜೆ ಕೂಡ ನಡೆದಿದ್ದು, ಆಂಜನೇಯ ಮೂರ್ತಿಯೂ ನೆಲೆ ನಿಲ್ಲಲಿದೆ. ಆಂಜನೇಯ ನಿಜವಾದ ರಾಮನ ಸೇವೆ ಮಾಡಿದವನು. ಅವನಿಗಿಂತ ದಾಸರಿಲ್ಲ ಅಂತಾರೆ.ನಾಸೀರ್ ಅವರ ಈ ಸೇವೆಗೆ ನಾಗರಿಕ ಸಮಾಜ ಕೂಡ ಭೇಷ್ ಅಂದಿದೆ. ಈಗಾಗಲೇ ಜಾಗ ಟ್ರಸ್ಟ್ ಹೆಸರಿಗೆ ನೋಂದಣಿಯಾಗಿದ್ದು, ಶೀಘ್ರದಲ್ಲೇ ಇಲ್ಲಿ ಅನಾಥಾಶ್ರಮ, ವೃದ್ಧಾಶ್ರಮ, ಗುರುಕುಲ, ಆಂಜನೇಯ ಮೂರ್ತಿ ಹಾಗೂ ಗೋಶಾಲೆ ಆರಂಭಗೊಳ್ಳಲಿದೆ.
ಹಿಂದೂ-ಮುಸ್ಲಿಂ ಅಂತಾ ಭೇಧ ಮಾಡುವವರ ನಡುವೆ, ನಾಸೀರ್ ಅವರ ಈ ಸೇವೆ ಸಾಮರಸ್ಯಕ್ಕೆ ಸಹಕಾರಿಯೂ ಆಗಿದೆ.ಗೋವು, ಆಂಜನೇಯನಿಗಾಗಿ ಕೋಟ್ಯಂತರ ಬೆಲೆಯ ಭೂದಾನ ಮಾಡಿರುವ ನಾಸೀರ್ ಕಲಿಯುಗದ ಕರ್ಣ ಅಂದ್ರೆ ಅತಿಶೋಕ್ತಿಯೇನಲ್ಲ.
ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು.