ಬೆಂಗಳೂರು : ಫ್ರೀಡಂ ಪಾರ್ಕನಲ್ಲಿ ಕಳೆದ 241 ದಿನಗಳಿಂದ ವಾಲ್ಮೀಕಿ ಸಮುದಾಯದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭೋವಿ ಪೀಠದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಭಾಗಿಯಾಗಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲು ಕೋರಿ ಪ್ರತಿಭಟನೆ ನಡೆಸಿದ್ದು, ಇಂದಿನ ಪ್ರತಿಭಟನೆಗೆ ಸಾಥ್ ನೀಡಿದ ಹರಿಹರ ಪೀಠದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾಥ್ ನೀಡಿದ್ದಾರೆ.
ಇನ್ನು, ಭೋವಿ ಪೀಠದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಭಾಗಿಯಾಗಿದ್ದು, ಪ್ರತಿಭಟನೆಯಲ್ಲಿ ನಿರತರಾಗಿರುವ ಸ್ವಾಮೀಜಿಗಳ ಭೇಟಿಗೆ ಬಿಜೆಪಿ ಶಾಸಕ ಆಗಮಿಸಿದರು. ಫ್ರೀಡಂ ಪಾಕ್೯ಗೆ ಆಗಮಿಸಿದ ಬಿಜೆಪಿ ನಿಯೋಗದ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್. ಅಶೋಕ್, ಸಚಿವ ಶ್ರೀರಾಮುಲು, ಡಾ. ಕೆ ಸುಧಾಕರ್, ಸಚಿವ ಆನಂದ್ ಸಿಂಗ್ ಸಿ.ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ರಾಜೀವ್ ಗೌಡ ಆಗಮನ ಪ್ರತಿಭಟೆ ಕೈ ಬಿಡುವಂತೆ ಸಚಿವರಿಂದ ಮನವಿ ಮಾಡಿದ್ದಾರೆ.