Monday, December 23, 2024

ಚಿಕಿತ್ಸೆಗೆಂದು ಬರುವ ಮಹಿಳಾ ರೋಗಿಗಳೇ ಇತನ ಟಾರ್ಗೆಟ್‌..!

ಬೆಂಗಳೂರು : ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಚೇಷ್ಟೆ ತೀರಿಸಿಕೊಳ್ಳುವ ಘಟನೆ ಚಂದ್ರಾಲೇಔಟ್ ಬಳಿ ಇರುವ ಅರುಂಧತಿ ನಗರದಲ್ಲಿರುವ ಕ್ಲಿನಿಕ್ ಬಳಿ ನಡೆಯಿತು.

ತಮ್ಮ ಇಡೀ ಜೀವವನ್ನೇ ವೈದ್ಯನನ್ನ ನಂಬಿ ಆತ ನೀಡು ಚಿಕಿತ್ಸೆ ಪಡೆದುಕೊಳ್ತಾರೆ. ಆ ನಂಬಿಕೆಯಿಂದ ಬಂದಿದ್ದವರಿಗೆ ಆ ವೈದ್ಯ ಏನು ಮಾಡಿದ್ದ ಗೊತ್ತಾ…? ಯಸ್ ಇಲ್ಲೊಬ್ಬ ವೈದ್ಯ ವೃತ್ತಿಗೇ ಅವಮಾನ ಮಾಡೋ ಕೆಲಸ ಮಾಡಿದ್ದಾನೆ. ನಗರದಲ್ಲಿದ್ದಾನೊಬ್ಬ ಕಾಮುಕ ಡಾಕ್ಟರ್, ತನ್ನಲ್ಲಿ ಚಿಕಿತ್ಸೆಗೆಂದು ಬರುವ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್ ಆಗಿದ್ದಾರೆ.

ಇನ್ನು, ಹೊಟ್ಟೆ ನೋವು ಎಂದು ಹೋಗಿದ್ದ 19 ರ ಯುವತಿ, ತನ್ನ ಅಜ್ಜಿಯ ಜೊತ ಕ್ಲಿನಿಕ್​ಗೆ ಹೋಗಿದ್ದಳು, ಅಜ್ಜಿಯನ್ನ ಹೊರ ಕೂರಿಸಿ ಯುವತಿಗೆ ಗ್ಲೂಕೋಸ್ ಹಾಕಿಸಿ ಮಲಗಿಸಿದ್ದ ವೈದ್ಯ ಉಬೇದುಲ್ಲ ನಂತರ ಆಕೆಯ ಮೇಲೇ ಲೈಂಗಿಕ ದೌರ್ಜನ್ಯ ಮಾಡಲು ಯತ್ನಿಸಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ಎದ್ದರೆ  ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದ ಉಬೇದುಲ್ಲ, ಇದನ್ನ ಹೇಳಿದರೆ ಸರಿ ಇರಲ್ಲ ಎಂದು ಹೇಳಿ ವೈದ್ಯ ಮನೆಗೆ ಕಳಿಸಿದ್ದಾನೆ.

RELATED ARTICLES

Related Articles

TRENDING ARTICLES