ಬೆಂಗಳೂರು: ಚಾಲಕರ ಹಾಗೂ ಪ್ರಯಾಣಿಕರ ವಂಚನೆ ಹಿನ್ನಲೆಯಲ್ಲಿ ಓಲಾ ಊಬರ್ ಕಂಪನಿಗಳಿಗೆ ಸೆಡ್ಡು ಹೊಡಯಲು ಆಟೋ ಯೂನಿಯನ್ ಚಾಲಕರು ಹೊಸ ಆ್ಯಪ್ ರಚಿಸಲು ಮುಂದಾಗಿದ್ದಾರೆ.
ಓಲಾ ಊಬರ್ ಕಂಪನಿಗಳಿಗೆ ಮೊದಲ 2 ಕಿ.ಮೀ.ಗಳಿಗೆ 30 ರೂ ಹಾಗೂ ಬಳಿಕ ಪ್ರತಿ ಕಿ.ಮೀ ಗೆ 15 ರೂ ನಿಗದಿಪಡಿಸಲಾಗಿದೆ. ಆದರೆ, ಈ ಕಂಪನಿಗಳು ಜನರಿಂದ ಬೇಕಾಬಿಟ್ಟಿ ಹಣ ಕೀಳುತ್ತಿವೆ. ಈ ಬಗ್ಗೆ ಮೂರು ದಿನದಲ್ಲಿ ವರದಿ ಕೊಡುವಂತೆ ರಾಜ್ಯ ಸರ್ಕಾರ ಓಲಾ ಊಬರ್ ಕಂಪನಿಗೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾತನಾಡಿದ ಆಟೋ ಯೂನಿಯನ್ ಅಧ್ಯಕ್ಷ ರುಧ್ರಮೂರ್ತಿ, ನೂತನ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಗ್ರಾಹಕರಿಗೆ ಹೇಗೆ ಅನುಕೂಲವಾಗುತ್ತದೆ. ಒಂದು ಕಡೆ ಗ್ರಾಹಕರಿಗೆ ಹಾಗೂ ಇನ್ನೊಂದು ಕಡೆ ಆಟೋ ಚಾಲಕರಿಗೂ ವಂಚನೆ ಮಾಡಲಾಗುತ್ತಿದೆ. ಇದ್ರಿಂದ ಬೇಸೆತ್ತು ಯಾವುದೇ ಮಧ್ಯವರ್ತಿ ಇಲ್ಲದೆ, ನೂತನ ಆ್ಯಪ್ ರಚಿಸಲಾಗಿದೆ ಎಂದರು.
‘ನಮ್ಮ ಯಾತ್ರಿ’ ಅನ್ನೋ ಹೊಸ ಆಟೋ ಬುಕ್ಕಿಂಗ್ ಆ್ಯಪ್, 2 ಕಿಲೋಮೀಟರ್ ಗೆ ಕೇವಲ 30 ರೂಪಾಯಿ ದರದಲ್ಲಿ ಗ್ರಾಹಕರಿಗೆ ಸೇವೆ ನೀಡಲಿದೆ. ಬುಕ್ಕಿಂಗ್ ಚಾಚ್೯ 10 ರೂಪಾಯಿ ಸೇರಿ ಒಟ್ಟು 40 ರೂಪಾಯಿಯಲ್ಲಿ ನೀವು ಕರೆದ ಕಡೆ ಈ ಆಟೋ ಬರಲಿವೆ.
ಇನ್ನೂ ನಿಗದಿತ ಕಿಲೋಮೀಟರ್ ಗಿಂದ ದೂರ ಸಂಚಾರ ಮಾಡಬೇಕು ಎಂದು ಗ್ರಾಹಕರು ಇಚ್ಛಿಸಿದ್ರೆ 1ಕಿಲೋಮೀಟರ್ ಗೆ 15 ರೂ ನಂತೆ ನಿಗದಿ ಮಾಡಲಾಗುತ್ತದೆ ಎಂದು ಆಟೋಚಾಲಕರ ಯೂನಿಯನ್ ಮುಖಂಡ ರುದ್ರ ಮೂರ್ತಿ ತಿಳಿಸಿದರು.