ಉತ್ತರ ಪ್ರದೇಶ : ದೇಶವೇ ಎದುರು ನೋಡುತ್ತಿರುವ ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೇ.50ರಷ್ಟು ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಂದಿರ ನಿರ್ಮಾಣ ಟ್ರಸ್ಟ್ ತಿಳಿಸಿರುವ ಪ್ರಕಾರ 2024ರ ಮಕರ ಸಂಕ್ರಾಂತಿ ದಿನ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. 2020ರಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು 2024ರ ಅಂತ್ಯಕ್ಕೆ ಮುಗಿಯುವ ನಿರೀಕ್ಷೆ ಇದೆ.
ಜೈಪುರದ ಪಂಚಖಂಡ ಪೀಠ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಕರ್ಮವನ್ನಷ್ಟೇ ಮಾಡು ಫಲದ ನಿರೀಕ್ಷೆ ಇಟ್ಟುಕೊಳ್ಳಬೇಡ ಎಂಬ ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣನ ಮಾತಿನ ಮೇಲೆ ನಂಬಿಕೆ ಇದೆ. ಅದರಂತೆ 1949ರಿಂದಲೂ ನಿರಂತರ ಶ್ರಮದ ಫಲವಾಗಿ ಇದೀಗ ರಾಮಮಂದಿರ ನಿರ್ಮಾಣ ಕಾರ್ಯದ ಕನಸು ನನಸಾಗುತ್ತಿದೆ. ಈ ಎಲ್ಲ ಶ್ರಮದಿಂದಾಗಿ ಶೇ.50ಕ್ಕೂ ಅಧಿಕ ನಿರ್ಮಾಣ ಕಾರ್ಯ ಮುಗಿದಿದೆ ಎಂದು ತಿಳಿಸಿದರು.