ಹಾಸನ: ಆ ಊರಿನ ಯುವಕರು ಹಾಗೂ ಗ್ರಾಮಸ್ಥರೆಲ್ಲರೂ ಗಣೇಶ ವಿಸರ್ಜನೆ ಮಾಡೋದಕ್ಕೆ ಅಂತಾ ಫುಲ್ ಜೋಶ್ ನಲ್ಲಿದ್ರು, ಗಣೇಶ ವಿಸರ್ಜನೆ ಮಾಡೋಕೆ ಹೋಗಿದ್ದಾಗ ದುರುಂತವೊಂದು ನಡೆದೇ ಹೋಗಿತ್ತು. ಗಣೇಶನ ಜೊತೆ ಇಬ್ಬರು ನೀರಿನಲ್ಲಿ ಮುಳುಗಿ ಹೋಗಿದ್ರು. ಸಾವನ್ನಪ್ಪಿದ್ದ ಸಹೋದರನ್ನ ನೋಡೋಕೆ ಅಂತಾ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ಧಾರುಣ ಸಾವು. ಈಜು ಬಾರದೇ ಇದ್ದರೂ ನೀರಿಗೆ ಇಳಿದು ಪ್ರಾಣ ಕಳೆದುಕೊಂಡು ಯುವಕರು. ಸಾವನ್ನಪ್ಪಿದ್ದ ಸಹೋದರನನ್ನು ನೋಡಲು ಬಂದ ಮತ್ತೊಬ್ಬ ಸಹೋದರನೂ ಹೃದಯಾಘಾತದಿಂದ ಸಾವಿಗೀಡಾದ ಇಂತಹದ್ದೊಂದು ಕರುಣಾಜನಕ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ವಡಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಪ್ರವೀಣ್(28), ಆಟೋ ಚಾಲಕನಾಗಿದ್ದ ನಾಗರಾಜು(32) ಮೃತದುರ್ದೈವಿಗಳು. ಹಲವು ವರ್ಷಗಳ ನಂತರ ತುಂಬಿದ್ದ ಗ್ರಾಮದ ಕೆರೆಯಲ್ಲಿಯೇ ಗಣಪತಿ ವಿಸರ್ಜನೆ ಮಾಡಬೇಕೆಂದು ನಿರ್ಧರಿಸಿ, ನಿನ್ನೆ ಸಂಜೆ ಗ್ರಾಮದಲ್ಲಿ ಕೂರಿಸಿದ್ದ ಗಣಪತಿಯನ್ನು ವಿಸರ್ಜನೆ ಮಾಡೋದಕ್ಕೆ ಅಂತಾ ಹೋಗಿದ್ದಾರೆ. ಇಬ್ಬರಿಗೂ ಈಜು ಬಾರದೇ ಇದ್ದರೂ ನೀರಿಗೆ ಇಳಿದಿದ್ದಾರೆ. ಗಣಪತಿ ವಿಜರ್ಸನೆಯಾಗೋ ಸಮಯದ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರ ಸಾವು ಅಂತಿಮ ದರ್ಶನಕ್ಕೆ ಬಂದ ಮಧು ಎಂಬಾತನೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಹಾಸನದ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಮೃತ ನಾಗಾರಾಜುವನ್ನ ನೋಡಲು ಬಂದಿದ್ದ ಮಧು, ಹೆಚ್ಚು ಒತ್ತಡಕ್ಕೊಳಗಾಗಿ ಕಣ್ಣೀರಿಡುತ್ತಾ ಆತಂಕಕ್ಕೊಳಗಾಗಿದ್ದಾರೆ. ಸಹೋದರನ ಮೃತದೇಹವನ್ನು ನೋಡಿಕೊಂಡು ಹೊರಕ್ಕೆ ಬರುತ್ತಿದ್ದಂತೆ ಮಧು ಇದ್ದಕ್ಕಿದ್ದಂತೆ ಕೆಳಕ್ಕೆ ಕುಸಿದಿದ್ದಾರೆ. ತಕ್ಷಣವೇ ಐಸಿಯೂ ನಲ್ಲಿ ಕೊಡಿಸಿತಾದರೂ ಮಧು ಸಾವನಪ್ಪಿದ್ದಾನೆ. ಮಧು ಅಂಗವಿಕಲನಾಗಿದ್ದರೂ ಶ್ರಮಪಟ್ಟು ದುಡಿಯುತ್ತಿದ್ದಂತಹ ವ್ಯಕ್ತಿ, ಬೆಂಗಳೂರಿನಲ್ಲಿ ಚಿಪ್ಸ್, ವಾಟರ್ ಬಾಟೆಲ್ ಹೋಲ್ ಸೇಲ್ ಬ್ಯುಸಿನೆಸ್ ಮಾಡ್ತಾ ಇದ್ದರು. ಕಾಲು ಅಂಗವಿಕಲತೆಯಿಂದ ಕೂಡಿದ್ರೂ ತೆವಳುತ್ತಲೇ ಬ್ಯುಸಿನೆಲ್ ಮಾಡ್ತಾ ಜೀವನ ಸಾಗಿಸ್ತಾ ಇದ್ರು. ಈ ನಡುವೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ವೇಳೆ ಇಂತಹದ್ದೊಂದು ದುರ್ಘಟನೆ ನಡೆದಿದೆ. ಸಂಬಂಧಿಕರು ಹಾಗೂ ಗ್ರಾಮಸ್ಥರು ಸಹೋದರರ ಸಾವಿಗೆ ಕಣ್ಣೀರಿಟ್ಟಿದ್ದಾರೆ..
ಗಣೇಶ ಮೂರ್ತಿ ವಿಜರ್ಸನೆಯ ಸಂಭ್ರಮದ ವೇಳೆ ದುರ್ಘಟನೆ ನಡೆದಿದ್ದು, ಈಡೀ ಗ್ರಾಮದಲ್ಲಿ ದುಃಖದ ವಾತಾವರಣ ಮನೆ ಮಾಡಿದೆ. ಅಂಗಲಿಕನಾದರೂ ಕೂಲಿ ನಾಲಿ ಮಾಡಿ, ಜೀವನ ಸಾಗಿಸ್ತಾ ಇದ್ದ ಮಧು ಸಾವು ಕೂಡಾ ಎಲ್ಲರ ಮನ ಕಲುಕುವಂತಿದೆ. ಸಹೋದರಿಬ್ಬರನ್ನ ಕಳೆದುಕೊಂಡಿದ್ದು ಮನೆಮಂದಿಯೆಲ್ಲಾ ಅನಾಥರಾಗಿದ್ದು, ಸರ್ಕಾರ ಅಥವಾ ಜಿಲ್ಲಾಡಳಿತ ಮಾನವೀಯತೆಯ ಆಧಾರದಲ್ಲಿ ಸೂಕ್ತವಾದ ಪರಿಹಾರವನ್ನ ಕಲ್ಪಿಸಿಕೊಡಲಿ ಅಂತಾ ಸಾರ್ವಜನಿಕರು ಒತ್ತಾಯ ಮಾಡ್ತಿದ್ದಾರೆ.