ಬೆಂಗಳೂರು : ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಅವರು, ನಾಗಮೋಹನ್ ದಾಸ್ ವರದಿ ಅನುಷ್ಠಾನ ಆಗಬೇಕು. ಎಸ್ ಸಿ ಸಮುದಾಯಕ್ಕೆ 15% ಯಿಂದ 17% ಗೆ ಮೀಸಲಾತಿ ಹೆಚ್ವಳ ಆಗಬೇಕು. ಎಸ್ ಟಿ ಸಮುದಾಯಕ್ಕೆ 3% ಯಿಂದ 7% ಗೆ ಮೀಸಲಾತಿ ಹೆಚ್ಚಳ ಆಗಬೇಕು. ಸರ್ಕಾರ ಕೂಡಲೇ ಅಧಿವೇಶನ ಕರೆದು ಒಪ್ಪಿಗೆ ಕೊಡಬೇಕು. ಮೀಸಲಾತಿ ಹೆಚ್ಚಳ ಕೇಂದ್ರಕ್ಕೆ ಶಿಫಾರಸ್ಸು ಕಳಿಸಲು ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ ಎಂದರು.
ಕೇಂದ್ರ ಸರ್ಕಾರ 9 ಶೆಡ್ಯೂಲ್ಡ್ ಗೆ ಸೇರಿಸಬೇಕು. ಸಭೆ ಕರೆಯೋದು ತಡ ಆಗಿದೆ ಅಂತಾ ಹೇಳಿದ್ದೇನೆ. ಸಿಎಂ ಕೂಡ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಕೊಂಡಿದ್ದಾರೆ ಎಂದರು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಆದರೆ ನಾವು ತಕ್ಷಣ ವಿಶೇಷ ಅಧಿವೇಶನ ಕರೆದು ರೆಸಲ್ಯೂಷನ್ ಮಾಡಿ ಎಂದು ಹೇಳಿದ್ದೇವೆ. ಒಟ್ಟಾರೆ ಶೇ 24 ರಷ್ಟು ಹೆಚ್ಚಳಕ್ಕೆ ಆದೇಶ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಮ್ಮದೇ ಇದೆ. ಸುಗ್ರೀವಾಜ್ಞೆ ಹೊರಡಿಸಿ 9 ನೇ ಶೆಡ್ಯೂಲ್ಡ್ ಗೆ ಸೇರಿಸಬೇಕು. ತಮಿಳುನಾಡು, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರದಲ್ಲಿ ಮಾಡಿದ್ದಾರೆ ಎಂದರು.