Thursday, January 23, 2025

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಮುಖಭಂಗ

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಅಂತಿಮ ಹಂತದ ಯುದ್ಧಕ್ಕೆ ಸಿದ್ದವಾಗ್ತಿದೆ. ಈ ಮಧ್ಯೆ, ಪರಮಾಣು ದಾಳಿ ನಡೆಸೋದಾಗಿ ಎಚ್ಚರಿಕೆ ಗಂಟೆ ಬಾರಿಸಿದ್ರು ವ್ಲಾದಿಮಿರ್‌ ಪುಟಿನ್. ಆದ್ರೆ, ಅದು ಸಾಧ್ಯವಾದ್ರೆ, ಉಕ್ರೇನ್ ಸಂಪೂರ್ಣ ನಾಶವಾಗಲಿದೆ ಅನ್ನೋ ಆತಂಕ ವಿಶ್ವನಾಯಕರಿಗೆ ಶುರುವಾಗಿದೆ. ಈ ಮಧ್ಯೆ, ಪುಟಿನ್ ಪರಮಾಣ ದಾಳಿ ಮಾಡ್ತೀನಿ ಎಂದಿರೋದು ಜೋಕಾ..? ಹೀಗೊಂದು ಪ್ರಶ್ನೆ ಹುಟ್ಟುತ್ತಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಹೆಚ್ಚುತ್ತಲೇ ಇದೆ. ಉಕ್ರೇನ್ ಜತೆ ಯುದ್ಧ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಉಕ್ರೇನ್ನ ಹಲವು ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕಳೆದ ವಾರವಷ್ಟೇ ಉಕ್ರೇನ್ನ 4 ಪ್ರದೇಶಗಳನ್ನು ರಷ್ಯಾ ಅಧಿಕೃತವಾಗಿ ಸ್ವಾಧೀನಕ್ಕೆ ಪಡೆದಿತ್ತು. ಇದರ ನಡುವೆ ಪಶ್ಚಿಮದ ದೇಶಗಳ ವಿರುದ್ಧ ಅಣ್ವಸ್ತ್ರ ಬಳಕೆ ಮಾಡುವುದಾಗಿ ರಷ್ಯಾ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ , ರಷ್ಯಾದ ಅಧ್ಯಕ್ಷ ಪುಟಿನ್ ಅವರ ಹೇಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳುತ್ತಿರುವ ವ್ಲಾಡಿಮಿರ್ ಪುಟಿನ್ ತಮಾಷೆಗೆ ಈ ಮಾತನ್ನು ಹೇಳುತ್ತಿಲ್ಲ. ನಮಗೆ ಪುಟಿನ್ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ಅಣ್ವಸ್ತ್ರ ದಾಳಿ ಬಗ್ಗೆ ತಮಾಷೆಗೆ ಹೇಳಿಕೆ ನೀಡುತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹಲವು ತಿಂಗಳುಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಉಕ್ರೇನ್ ಮೇಲೆ ದಂಡೆತ್ತಿ ಹೋಗಿದ್ದ ರಷ್ಯಾದ ಮಿಲಿಟರಿ ಶಕ್ತಿಗೆ ಉಕ್ರೇನ್ ತತ್ತರಿಸಿಹೋಗಿತ್ತು. ಬಲಶಾಲಿ ರಾಷ್ಟ್ರವಾದ ರಷ್ಯಾ ಉಕ್ರೇನ್ನಂತಹ ಸಣ್ಣ ದೇಶದ ಮೇಲೆ ಮಾಡುತ್ತಿರುವ ದಾಳಿಯನ್ನು ಅನೇಕ ರಾಷ್ಟ್ರಗಳು ಖಂಡಿಸಿದ್ದವು. ಇದುವರೆಗೂ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ರಷ್ಯಾವನ್ನು ಇದೀಗ ಉಕ್ರೇನ್ ಹಿಮ್ಮೆಟ್ಟಿಸಿದೆ. ಯುರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ ರಷ್ಯಾವನ್ನು ಉಕ್ರೇನ್ ಎದುರಿಸಿದೆ. ಇದರಿಂದ ಅವಮಾನಗೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ತಮ್ಮ ಸೇನೆ ದುರ್ಬಲವಾಗುತ್ತಿರುವುದರಿಂದ ಅಣ್ವಸ್ತ್ರ ದಾಳಿ ಮೂಲಕ ಉಕ್ರೇನ್ ಅನ್ನು ಸದೆಬಡಿಯಲು ರಷ್ಯಾ ನಿರ್ಧರಿಸಿದೆ.

RELATED ARTICLES

Related Articles

TRENDING ARTICLES