Sunday, December 22, 2024

ST ಸಮಾಜಕ್ಕೆ ಮೀಸಲಾತಿ; ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಮಹತ್ವದ ಚರ್ಚೆ

ಬೆಂಗಳೂರುಎಸ್‌ಟಿ ಶೇ 3ರಿಂದ 7.5 ಮೀಸಲಾತಿ ನೀಡುವುದಕ್ಕೆ ಎಸ್​ಸಿ ಹಾಗೂ ಎಸ್​ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕೆಂಬ ನಿಲುವಿಗೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. 

ಎಸ್​ಟಿ ಸಮುದಾಯಕ್ಕೆ ಶೇ 7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಹಲವು ದಿನಗಳಿಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಅಲ್ಲದೇ, ಬೇಡಿಕೆಯನ್ನ ಸರ್ಕಾರದ ಮುಂದೆ ಇಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಿಎಂ ಕೃಷ್ಣಾ ಗೃಹ ಕಚೇರಿಯಲ್ಲಿ ಸರ್ವ ಪಕ್ಷ ನಾಯಕರ ಸಭೆ ಕರೆಯಲಾಯಿತು. ಈ ಸಭೆಯಲ್ಲಿ ಮಾಜಿ ಸಿಎಂ ಹೆಚ್​ಡಿಕೆ, ಸಚಿವ ಶ್ರೀರಾಮುಲು, ಕಾನೂನು ಜೆಸಿ ಮಾಧುಸ್ವಾಮಿ, ಸಚಿವ ಗೋವಿಂದ್​ ಕಾರಜೋಳ್​​ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಸರ್ವ ಪಕ್ಷದಲ್ಲಿ ಸಿಎಂ ಮಾತನಾಡಿ, ಶೇ 50 ಕ್ಕಿಂತ ಹೆಚ್ಚಿಗೆ ಮೀಸಲಾತಿ ಹೋಗಬಾರದು ಎಂದು ಕೋರ್ಟ್​ ಹೇಳಿದೆ. ಎಸ್​ಟಿಯಲ್ಲಿ 52 ಜಾತಿಗಳಿವೆ. ಎಸ್​ಟಿ ಸಮುದಾಯದ ಮೀಸಲಾತಿಯಲ್ಲಿ ಯಾವುದೇ ರೀತಿಯಲ್ಲಿ ಕಾನೂನು ತೊಡಕು ಆಗಬಾರದೆಂದು ಹೇಳಲಾಗಿದೆ. ನಿಮ್ಮೆಲ್ಲಾ ಅಭಿಪ್ರಾಯಗಳನ್ನ ಪರಿಗಣಿಸಿ ಬರುವ ಡಿಸೆಂಬರ್​ನಲ್ಲಿ ಸದನದಲ್ಲಿ ಮೀಸಲಾತಿ ಘೋಷಣೆ ಮಾಡುವ ಬಗ್ಗೆ ಚಿಂತನೆಯನ್ನ ಮಾಡಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚನೆ ಮಾಡಿದ್ದ ನಾಗಮೋಹನ ದಾಸ್ ವರದಿ ಈಗಾಗಲೇ ಎಸ್ಟಿ ಸಮುದಾಯಕ್ಕೆ 7 ರಷ್ಟು ನೀಡಿ ಎಂದಿದೆ. ಈ ವರದಿ ಬಂದ ಬೆನ್ನಲೆಯಲ್ಲಿ ಮತ್ತೊಮ್ಮೆ ರಾಜ್ಯ ಸರ್ಕಾರ ಪರೀಶಿಲಿಸಲು ತಂಡ ರಚಣೆ ಮಾಡಿತ್ತು.
ನಾಗಮೋಹನ್ ದಾಸ್ ಸಮಿತಿಯು ಎಸ್​ಸಿ ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ, ಎಸ್​ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಮೀಸಲಾತಿಯನ್ನು ಶೇ 50ಕ್ಕಿಂತ ಹೆಚ್ಚಿಗೆ ಮೀರಬಾರದೆಂದು ಎಂದು ಕೋರ್ಟ್​ ಸೂಚಿಸಿದೆ. ಈ ಬೆನ್ನಲ್ಲೇ ನಾಗಮೋಹನ್ ದಾಸ್ ಸಮಿತಿ ಶಿಫಾರಸು ಸರ್ಕಾರ ಜಾರಿ ಮಾಡಿದರೆ ಮೀಸಲಾತಿ ಪ್ರಮಾಣವು ಒಟ್ಟಾರೆ ಶೇ 56ಕ್ಕೆ ಹೆಚ್ಚಳವಾಗುತ್ತದೆ. ಈ ಸಮಸ್ಯೆ ನಿರ್ವಹಿಸುವುದು ಹೇಗೆ ಎನ್ನುವು ಬಗ್ಗೆ ಸಿಎಂ ಗೊಂದಲಿದ್ದಾರೆ. ಹೀಗಾಗಿ ಇಂದು ಸರ್ವ ಪಕ್ಷಗಳ ಸಭೆ ಕೆರೆದು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES