Monday, December 23, 2024

150 ಸೀಟು ಗೆದ್ದು BJP ಅಧಿಕಾರಕ್ಕೆ ಬರಲಿದೆ : ನಳೀನ್ ಕುಮಾರ್ ಕಟೀಲ್

ಬೆಂಗಳೂರು : ವಿಜಯದಶಮಿ, ದಸರಾ ಹಬ್ಬ ಮುಗಿಸಿ, ವಿಜಯ ಯಾತ್ರೆಯನ್ನು ಸಂಘಟಿಸಿದ್ದೇವೆ. ತಾಯಿ ದುಷ್ಟರ ಸಂಹಾರ ಮಾಡಿದಳು. ತಾಯಿ ಪ್ರಾರ್ಥನೆ ಮೂಲಕ ಕಾರ್ಯಕಾರಿಣಿ ಆರಂಭವಾಗಿದೆ ಎಂದು ಇಂದು ನಡೆದ BJP ಕಾರ್ಯಕಾರಿಣಿ ಸಭೆಯಲ್ಲಿ BJP ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

150 ಸೀಟುಗಳನ್ನು ಗೆಲ್ಲುವ ಮೂಲಕ BJP ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕೆಂಪೇಗೌಡರು ಕಟ್ಟಿದ ನಾಡಿದು, ಬೆಂಗಳೂರು ಕಟ್ಟಿದ ವ್ಯಕ್ತಿಯ ಸ್ಮರಣೆ ಮಾಡಿ ಕಾರ್ಯಕ್ರಮ ಆರಂಭಿಸಿದ್ದೇವೆ. ಹೊಸಪೇಟೆ ಬಳಿಕ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ರು. ಮುಂದುವರಿದು ಮಾತನಾಡಿದ ಅವರು, 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡೋ ಮೂಲಕ ಕೆಂಪೇಗೌಡರ ಸ್ಮರಣೆ ಮಾಡುವ ಕೆಲಸ ಮಾಡಲಾಗಿದೆ.

ಇನ್ನು, ಕಳೆದ ಮೂರು ವರ್ಷಗಳಿಂದ ನೆರೆ ಹೆಚ್ಚಾಗಿದೆ, ಸಂಕಷ್ಟದಲ್ಲೂ ಯಡಿಯೂರಪ್ಪ ಒಬ್ಬರೇ ಪ್ರವಾಸ ಮಾಡಿದ್ರು. ಈಗ ಬೊಮ್ಮಾಯಿ ಅವರು ಉತ್ತಮ ತಂಡದ ಜೊತೆ ಕೆಲಸ ಮಾಡ್ತಿದ್ದಾರೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ‌ ಉತ್ತಮ ಯೋಜನೆ ನೀಡಿದ್ದಾರೆ ಎಂದು ಕಟೀಲ್​​ ತಿಳಿಸಿದರು.

RELATED ARTICLES

Related Articles

TRENDING ARTICLES