Sunday, September 29, 2024

ದಸರಾ ಗಜಪಡೆಗಳು ಮರಳಿ ಕಾಡಿಗೆ

ಮೈಸೂರು : ನಾಡಹಬ್ಬ ಮೈಸೂರು ದಸರಾ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ದಸರಾ ಮೆರವಣಿಗೆಯ ಕೇಂದ್ರ ಬಿಂದು ಜಂಬೂ ಸವಾರಿ. 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡಿ ತಾಯಿಯನ್ನ ಹೊತ್ತು ರಾಜ ಬೀದಿಯಲ್ಲಿ ಸಾಗುವ ದೃಶ್ಯವನ್ನ ಈ ಬಾರಿ ಲಕ್ಷಾಂತರ ಮಂದಿ ಕಣ್ತುಂಬಿಕೊಂಡ್ರು. ಇದರ ಯಶಸ್ಸು ದಸರಾ ಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಹಾಗೂ ದಸರಾ ಗಜಪಡೆಗಳಿಗೆ ಸಲ್ಲುತ್ತದೆ. ಕಳೆದ ಒಂದೂವರೆ ತಿಂಗಳಿನಿಂದ ಮೈಸೂರು ಅರಮನೆಯಲ್ಲಿ ರಾಜಾತಿಥ್ಯವನ್ನ ಸ್ವೀಕರಿಸಿದ ದಸರಾ ಗಜಪಡೆಗಳಿಗೆ ಇಂದು ಅರಣ್ಯ ಇಲಾಖೆ ವತಿಯಿಂದ ಸಂಪ್ರದಾಯಕವಾಗಿ ಪೂಜೆ ಸಲ್ಲಿಸುವ ಮೂಲಕ ಕಾಡಿಗೆ ಬಿಳ್ಕೊಡಲಾಯ್ತು. ಶ್ರೀರಾಮ ಆನೆ ಮಾತ್ರ ಕಾಡಿಗೆ ಹೋಗಲು ಹಿಂದೇಟು ಹಾಕಿತ್ತು.

ಶ್ರೀರಾಮ ಆನೆ ಅರಮನೆ ವಾತಾವರಣಕ್ಕೆ ಹೊಂದಿಕೊಂಡಿದ್ದು, ಕಾಡಿಗೆ ಹೋಗಲು ಲಾರಿ ಹತ್ತಲು ನಿರಾಕರಿಸಿತ್ತು. ಶ್ರೀರಾಮ ಆನೆಯನ್ನ ಲಾರಿಗೆ ಹತ್ತಿಸಲು ಮಾವುತರು ಹಾಗೂ ಕಾವಾಡಿಗಳು ಹರಸಾಹಸಪಟ್ಟರು. ಎಷ್ಟೇ ಪ್ರಯತ್ನಿಸಿದ್ರು ಶ್ರೀರಾಮ ಮಾತ್ರ ನಾ ಬರಲ್ಲಾ, ಇಲ್ಲೇ ಇರುತ್ತೇನೆ ಎಂದು ಲಾರಿ ಹತ್ತಲು ಹಿಂದೇಟು ಹಾಕಿತ್ತು. ತಕ್ಷಣ ಶ್ರೀರಾಮನನ್ನ ಮನವೊಲಿಸಲು ಕ್ಯಾಪ್ಟನ್ ಅಭಿಮನ್ಯು ಬಂದರೂ, ಅದರ ಮಾತನ್ನ ಸಹ ಕೇಳಲಿಲ್ಲ. ಸ್ಥಳದಿಂದ ಓಡಿ ಹೋಯಿತು. ಇದರಿಂದ ರೊಚ್ಚಿಗೆದ್ದ ಕ್ಯಾಪ್ಟನ್ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಆನೆಗಳ ಸಹಾಯದೊಂದಿಗೆ ಅಭಿಮನ್ಯು ಜೋರಾಗಿ ಹಿಂದಿನಿಂದ ತಳ್ಳಿತ್ತು. ಒಲ್ಲದ ಮನಸ್ಸಿನಿಂದಲೇ ಶ್ರೀರಾಮ ಆನೆ ಲಾರಿ ಹತ್ತಿ ಕಾಡಿನತ್ತ ಪ್ರಯಾಣ ಬೆಳೆಸಿತು.

ಒಟ್ಟಾರೆ ಈ ಬಾರಿಯ ದಸರಾ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ದಸರಾ ರಾಯಾಭಾರಿಗಳಾದ ಮಾವುತರು, ಕಾವಾಡಿಗಳು ಹಾಗೂ ದಸರಾ ಗಜಪಡೆಗಳು ಖುಷಿಯಿಂದ ಕಾಡಿನತ್ತ ಪ್ರಯಾಣ ಬೆಳೆಸುವ ಮೂಲಕ ಮೈಸೂರಿಗೆ ಬೈ ಬೈ ಹೇಳಿದರು.

ಸುರೇಶ್ ಬಿ ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES