Thursday, January 23, 2025

ಫಿಫಾ ಬಳಿಕ ಖ್ಯಾತ ಫುಟ್‌ಬಾಲ್‌​ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿ.!

ನವದೆಹಲಿ: ಕತಾರ್‌ನಲ್ಲಿ ನಡೆಯಲಿರುವ 2022ರ ಫುಟ್‌ಬಾಲ್‌ ಫಿಫಾ ವಿಶ್ವಕಪ್ ನನ್ನ ವೃತ್ತಿಜೀವನ ಕೊನೆಯ ಪಂದ್ಯವಾಗಲಿದೆ ಎಂದು ಅರ್ಜೆಂಟೀನಾ ಫುಟ್‌ಬಾಲ್‌ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಗುರುವಾರ ಹೇಳಿದ್ದಾರೆ.

2022 ರ ಫಿಫಾ ವಿಶ್ವಕಪ್​ ನನಗೆ ಕೊನೆಯ ವಿಶ್ವಕಪ್ ಆಗಿದೆ. ನಾನು ವಿಶ್ವಕಪ್‌ನ ದಿನಗಳನ್ನು ಎಣಿಸುತ್ತಿದ್ದೇನೆ. ಸತ್ಯವೆಂದರೆ, ಸ್ವಲ್ಪ ಆತಂಕವಿದೆ. ಅದು ಬರುವವರೆಗೆ ನಾನು ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಶ್ವಕಪ್‌ನ ಆರಂಭಕ್ಕೆ ಕಾಯುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಈಗ ನಾವು ಅತ್ಯುತ್ತಮ ಕ್ಷಣದಲ್ಲಿದ್ದೇದ್ದು ಅತ್ಯುತ್ತಮವಾದ ಆಟಗಾರರ ಪಡೆಯನ್ನು ಹೊಂದಿದ್ದೇವೆ. ಆದರೆ ವಿಶ್ವಕಪ್‌ನಂತಹ ವೇದಿಕೆಯಲ್ಲಿ ಏನು ಬೇಕಾದರೂ ನಡೆಯಬಹುದು. ಎಲ್ಲಾ ಪಂದ್ಯಗಳು ಕೂಡ ಕಠಿಣವಾಗಿರುತ್ತದೆ. ಇಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡಗಳು ಯಾವಾಗಲೂ ಗೆಲ್ಲಲು ಸಾಧ್ಯವಾಗುವುದಿಲ್ಲ.ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿ ಪ್ರದರ್ಶನ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮೆಸ್ಸಿ 2007 ರಲ್ಲಿ ಅಂತಾರಾಷ್ಟ್ರೀಯ ಫುಟ್​ಬಾಲ್​ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಅರ್ಜೆಂಟೀನಾ ಪರ 164 ಪಂದ್ಯಗಳನ್ನು ಗೆದ್ದಿದ್ದಾರೆ.

RELATED ARTICLES

Related Articles

TRENDING ARTICLES