Monday, December 23, 2024

ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್‌ ಮಾಡಿದ ರಿಷಬ್‌ ಶೆಟ್ಟಿ

ಪ್ಯಾನ್​​ ಇಂಡಿಯಾ ಸಿನಿಮಾಗಳ ಮೂಲಕ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಬಿಗ್​ ಬ್ಯಾನರ್​​​​ ಹೊಂಬಾಳೆ ಫಿಲಂಸ್​​​. ಇದೀಗ ರಿಷಬ್ ಶೆಟ್ಟಿ​​ ಸಿನಿಮಾಂತ್ರಿಕನ ಕೈಚಳಕದಲ್ಲಿ ಕಾಂತಾರ ಕೂಡ ಭರ್ಜರಿ ಪ್ರದರ್ಶನ ಕಾಣ್ತಿದೆ.

ಕೇವಲ ಕನ್ನಡ ಭಾಷೆಯಲ್ಲಿ ತೆರೆಕಂಡಿದ್ದ ಕಾಂತಾರ ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ಹಳೆ ದಾಖಲೆಗಳನ್ನು ಧೂಳಿಪಟ ಮಾಡ್ತಿದೆ. ಪರಭಾಷೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿರುವ ಹಿನ್ನೆಲೆ ಹಿಂದಿಗೆ ಕಾಂತಾರ ಸಿನಿಮಾ ಡಬ್​ ಮಾಡಲಾಗ್ತಿದೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಗುಡ್​​ ನ್ಯೂಸ್​ ನೀಡಿದೆ ಚಿತ್ರತಂಡ.

ಅಕ್ಟೋಬರ್​ 9ರಂದು ಬೆಳಗ್ಗೆ 9.10ಕ್ಕೆ ‘ಕಾಂತಾರ’ ಚಿತ್ರದ ಹಿಂದಿ ಟ್ರೇಲರ್​ ಬಿಡುಗಡೆ ಆಗಲಿದೆ. ಈ ಸುದ್ದಿ ಕೇಳಿ ಪರಭಾಷೆಯ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬುಕ್​ ಮೈ ಶೋ ರೇಟಿಂಗ್​​​​​ನಲ್ಲೂ ಮುಂಚೂಣಿಯಲ್ಲಿರೋ ಕಾಂತಾರಾ 60 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಮೊದಲ ವಾರದಲ್ಲಿ ಈ ಪರಿಯ ಅಬ್ಬರ ಕಂಡು ಚಿತ್ರರಸಿಕರು ಥಿಯೇಟರ್​​ನತ್ತ ದಾಪುಗಾಲಾಕಿದ್ದಾರೆ. ಕರಾವಳಿಯ ನೇಟಿವಿಟಿಯ ಆಚರಣೆ ಕಂಡು ಪ್ರೇಕ್ಷಕರು ಮಂತ್ರಮುಗ್ಧವಾಗಿದ್ದಾರೆ.

RELATED ARTICLES

Related Articles

TRENDING ARTICLES